ಉಪಯುಕ್ತ ಸುದ್ದಿ

H.C. ಮಹದೇವಪ್ಪ ಅಧ್ಯಕ್ಷತೆಯಲ್ಲಿ SCSP/TSP ನೋಡಲ್ ಅಧಿಲಾರಿಗಳ ಸಭೆ

Share It

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಚಿವ ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಕೊಠಡಿ ಸಂಖ್ಯೆ 334 ರಲ್ಲಿ SCSP/TSP ನೋಡಲ್ ಅಧಿಕಾರಿಗಳ ಸಭೆ ನಡೆಯಿತು.

ಸಭೆಯಲ್ಲಿ ಪ್ರಮುಖವಾಗಿ ಪರಿಶಿಷ್ಟ ಜಾತಿ ಸಮುದಾಯಗಳ ಏಳಿಗೆಗಾಗಿ  ಮತ್ತು ಇಲಾಖೆಯ ನಿಗದಿ ಪಡಿಸಿಕೊಂಡಿರುವ ಅಭಿವೃದ್ಧಿಯ ಗುರಿ ಸಾಧಿಸುವುದಕ್ಕೆ ಹಣಕಾಸು ಇಲಾಖೆ ಸೂಕ್ತ ರೀತಿಯಲ್ಲಿ ನೆರವು ನೀಡಬೇಕೆಂದು ಅಭಿಮತ ವ್ಯಕ್ತಪಡಿಸಲಾಯಿತು.

ಈ ಕುರಿತು ಸಿಎಂ ಜತೆಗೆ ಚರ್ಚೆ ನಡೆಸಿ, ಯೋಜನೆಗೆ ಹಣಕಾಸಿನ ಕೊರತೆ ಕಾಡದಂತೆ ಕ್ರಮವಹಿಸುವ ಕುರಿತು ಸಚಿವ ಮಹದೇವಪ್ಪ ಭರವಸೆ ನೀಡಿದರು. ಯೋಜನೆಗಳು ತ್ವರಿತವಾಗಿ ಜಾರಿಗೊಳ್ಳಬೇಕು ಮತ್ತು ಪರಿಣಾಮಕಾರಿ ಫಲಾನುಭವಿಗಳಿಗೆ ಸಿಗಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಯೋಜನೆಯ ನೋಡೆಲ್ ಸಲಹೆಗಾರರಾದ ನಿವೃತ್ತ ಐಎಎಸ್ ಡಾ. ವೆಂಕಟಯ್ಯ, ಸರಕಾರದ ಕಾರ್ಯದರ್ಶಿ ರಂದೀಪ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ. ರಾಜೇಂದ್ರ ಕುಮಾರ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.


Share It

You cannot copy content of this page