ರಾಜಕೀಯ ಸುದ್ದಿ

ಬೆಂಗಳೂರಿನಲ್ಲಿ ಬಿಜೆಪಿಯ ಪ್ರಶಿಕ್ಷಣ ಅಭಿಯಾನ: ನಾಳೆ ರಾಷ್ಟ್ರೀಯ ಅಧ್ಯಕ್ಷ ನಿಬಿನ್ ಭಾಗಿ

Share It

ಬೆಂಗಳೂರು: ಉತ್ತರ ಜಿಲ್ಲೆಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಬಿಜೆಪಿ ಪ್ರಶಿಕ್ಷಣ ಮಹಾ ಅಭಿಯಾನವು ಯಲಹಂಕದ ರಮಡಾ ರೆಸಾರ್ಟ್ ನಲ್ಲಿ ಪ್ರಾರಂಭವಾಯಿತು.

ಈ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ನಾಯಕರುಗಳಾದ ಆರ್ ಅಶೋಕ್ ಛಲವಾದಿ ನಾರಾಯಣಸ್ವಾಮಿ ಇವರುಗಳ ಜೊತೆ ಬೈರತಿ ಸುರೇಶ್ ಲೆಹರ್ ಸಿಂಗ್ ವಿಶ್ವನಾಥ್ ಮುನಿರಾಜು ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಗೋಪಾಲಯ್ಯ ರವರು ಸಹ ಬಿಜೆಪಿ ನಾಯಕರುಗಳ ಜೊತೆಗೂಡಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಕಾರ್ಯಗಾರವು ಎರಡು ದಿನಗಳ ಕಾಲ ನಡೆಯಲಿದ್ದು ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ನಾಳಿನ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.


Share It

You cannot copy content of this page