ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಘೋಷಣೆಯಾಗುವ ಬೆನ್ನಲ್ಲೇ ಬಿಜೆಪಿ ತನ್ನ ಅಸಲಿ ಆಟ ಶುರು ಮಾಡಿಕೊಂಡಿದೆ ಎಂದು ಬಲ್ಲಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದಾದರೆ ಇನ್ನುಳಿದ ಎರಡು ವರ್ಷದ ಅವಧಿಗೆ ದಲಿತ ಸಿಎಂ ಘೋಷಣೆ ಮಾಡಿ, ಡಾ. ಜಿ ಪರಮೇಶ್ವರ್ ಅವರನ್ನು ಸಿಎಂ ಮಾಡುವ ಚಿಂತನೆ ನಡೆದಿತ್ತು.
ಆದರೆ, ಇದೀಗ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನ ಪಡೆಯುವುದು ಬಹುತೇಕ ಪಕ್ಕಾ ಎಂದು ಗೊತ್ತಾದ ಬೆನ್ನಲ್ಲೇ ಪರಮೇಶ್ವರ್ ಸೇರಿದಂತೆ ಕೆಲ ಪ್ರಮುಖ ದಲಿತ ನಾಯಕರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನವನ್ನು ನಡೆಸಲಾಗುತ್ತಿದೆ.
ನೆನ್ನೆಯ ಸಭೆಯ ಬಳಿಕವೇ ಡಾ. ಜಿ ಪರಮೇಶ್ವರ್ ಅವರಿಗೆ ಇಂತಹದ್ದೊಂದು ಆಫರ್ ನೀಡಿರುವ ಬಿಜೆಪಿ ಡಿ.ಕೆ.ಶಿವಕುಮಾರ್ ಸಿಎಂ ಆದ್ರೆ ಇನ್ನು ಆರು ತಿಂಗಳಲ್ಲೇ ಸರಕಾರವನ್ನು ಬೀಳಿಸಿ, ಚುನಾವಣೆಗೆ ಹೋಗುವ ಆಲೋಚನೆಯನ್ನು ನಡೆಸುತ್ತಿದೆ ಎನ್ನಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ನಡೆಯ ಬೆನ್ನಲ್ಲೇ ದಲಿತ ಸಮುದಾಯಗಳು ಸಹಜವಾಗಿಯೇ ಕಾಂಗ್ರೆಸ್ ವಿರುದ್ಧ ಆಕ್ರೋಶಗೊಳ್ಳಲಿವೆ. ಇದನ್ನು ಬಳಸಿಕೊಳ್ಳಲು ಪರಮೇಶ್ವರ್ ಅವರನ್ನು ಬಿಜೆಪಿಗೆ ಸೆಳೆದರೆ, ಮುಂದಿನ ಚುನಾವಣೆಯಲ್ಲಿ ದಲಿತ ಮತಗಳು ಕೂಡ ಬಿಜೆಪಿಗೆ ಬರಬಹುದು ಎಂಬ ಆಲೋಚನೆ ಹೈಕಮಾಂಡ್ ನಾಯಕರದ್ದು ಎನ್ನಲಾಗಿದೆ.

