ಬೆಳಗಾವಿ : ಅನಧಿಕೃತ ಠೇವಣಿ ಸಂಗ್ರಹ ಆರೋಪದಡಿ ಬಂಧಿತರಾಗಿದ್ದ ಶಿವಂ ಅಸೋಸಿಯೇಟ್ಸ್ ಮಾಲಕ ಶಿವಾನಂದ ನೀಲಣ್ಣವರ ಅವರಿಗೆ ಬೆಂಗಳೂರಿನ 92ನೇ ಸಿಟಿ ಸಿವಿಲ್ ಮತ್ತು ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಅವರು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಮೇ 15 ರಂದು ಬೆಳಗಾವಿಯ ಮಾಳಮಾರುತಿ ಪೊಲೀಸರು ಅವರನ್ನು ಬಂಧಿಸಿದ್ದರು. ಸೋಮವಾರ ಜೈಲಿನಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಓಂ ನಮಃ ಶಿವಾಯ ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಬಯಸುವ ವ್ಯಕ್ತಿ ನಾನು. ಬೇರೆ ಏನು ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

