ಸಚಿವರಾಗಿ ಮೊದಲ ಕಾಮಗಾರಿ ಉದ್ಘಾಟನೆ ಮಾಡಲಿರುವ ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು: ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ ಗೇಟ್ ಗಳ ಅಳವಡಿಕೆ ಕಾರ್ಯ ಸಂಪೂರ್ಣ ಪೂರ್ಣಗೊಂಡಿದ್ದು, ಜೂನ್ 26 ರಂದು ಉದ್ಘಾಟನೆ ಮಾಡಲು ತೀರ್ಮಾನಿಸಲಾಗಿದೆ.
ಆಗಸ್ಟ್ 2024 ರಲ್ಲಿ ಮೆಕಾನಿಕಲ್ ಫೇಲ್ಯೂರ್ ನಿಂದಾಗಿ ಗೇಟ್ ನಂಬರ್ 19 ಕೊಚ್ಚಿ ಹೋಗಿದ್ದು, ಇದರಿಂದಾಗಿ ಒಂದು ವಾರಗಳ ಕಲಾ ನೀರು ಪೋಲಾಗಿತ್ತು. ಆದರೆ, 16 ಮತ್ತು 17 ರಂದು ಅಧಿಕಾರಿಗಳು ಮತ್ತು ಮೆಕಾನಿಕಲ್ ತಂಡ ಮುತುವರ್ಜಿ ವಹಿಸಿ, ಕ್ರಸ್ಟ್ ಮೇಲೆ ಗೇಟ್ ಅಳವಡಿಸುವ ಕೆಲಸ ಮಾಡಿದ್ದರು.
ಅನಂತರ ಜೂನ್ 2025 ರಲ್ಲಿ ನಡೆದ ತುಂಗಭದ್ರಾ ಮಂಡಳಿ ಸಭೆಯಲ್ಲಿ ಅಣೆಕಟ್ಟೆಯ ಎಲ್ಲ 33 ಗೇಟ್ ಗಳನ್ನು ಬದಲಾಯಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದರ ಅನ್ವಯ ಕಾಮಗಾರಿಗೆ 36.14 ಕೋಟಿ ರು. ಅನುದಾನ ನಿಗದಿ ಮಾಡಲಾಗಿತ್ತು. ಅಹಮದಾಬಾದ್ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.
ಇದೀಗ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಮಳೆಗಾಲಕ್ಕೆ ಮೊದಲೇ ಉದ್ಘಾಟನೆ ಮಾಡಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಜೂನ್ 26 ರಂದು ಉದ್ಘಾಟನೆ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ.
ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಹಾಗು ಜಲಸಂಪನ್ಮೂಲ ಸಚಿವರಾದ ರಾಮಲಿಂಗಾ ರೆಡ್ಡಿ ಹಾಗು ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಡಿಕೆ ಶಿವಕುಮಾರ್ ಸಚಿವರಾಗಿದ್ದಾಗ ನಡೆದ ಕಾಮಗಾರಿ ಇದಾಗಿದ್ದು, ಮುಖ್ಯಮಂತ್ರಿಯಾಗಿ ಉದ್ಘಾಟನೆ ಮಾಡಲಿರುವ ಮೊದಲ ಕಾಮಗಾರಿಯಾಗಲಿದೆ.

