ಬೆಂಗಳೂರು: ನಟಿ ಕೃಷಿ ತಾಪಂಡ ಸ್ನೇಹಿತ ಹಾಗೂ ಉದ್ಯಮಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೃಷಿ ತಾಪಂಡ ನಡುವಿನ ಅನೈತಿಕ ಸಂಬಂಧವೇ ಸಾವಿಗೆ ಕಾರಣ ಎಂದು ವೈಶಾಕ್ ಪತ್ನಿ ದೂರು ನೀಡಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ದೂರು ನೀಡಿರುವ ಪತ್ನಿ, ನಟಿಯೊಂದಿಗೆ ತನ್ನ ಪತಿಗೆ ಅನೈತಿಕ ಸಂಬಂಧವಿತ್ತು ಎಂಬುದನ್ನು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಹೇಳಲಾಗಿದೆ. ವೈಶಾಕ್ ಆತ್ಮಹತ್ಯೆಗೆ ಶರಣಾಗಿರುವ ವಿಚಾರವನ್ನು ಆತನ ಕುಟುಂಬಸ್ಥರಿಗೆ ಮೊದಲು ತಿಳಿಸಿದ್ದೆ ಕೃಷಿ ಎಂದು ಹೇಳಲಾಗಿದೆ.
ಕೃಷಿ ತಾಪಂಡ ಮತ್ತು ವೈಶಾಕ್ ಒಂದೇ ಮನೆಯಲ್ಲಿ ವಾಸವಿದ್ದರು, ಇಬ್ಬರು ಒದೊಂದು ಕೀ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಕೃಷಿ ನೆನ್ನೆ ನೆಲಮಂಗಲ ಬಳಿಯ ಕ್ಷೇಮವನಕ್ಕೆ ತೆರಳಿದ್ದು, ಆ ವೇಳೆ ಕೃಷಿಗೆ ಮೆಸೇಜ್ ಮಾಡಿದ್ದ ವೈಶಾಕ್ ತಾನು ಆತ್ಮಹತ್ಯೆಗೆ ಶರಣಾಗುತ್ತಿರುವ ವಿಷಯ ಪ್ರಸ್ತಾಪ ಮಾಡಿದ್ದ ಎನ್ನಲಾಗಿದೆ.
ಇದನ್ನು ತಕ್ಷಣವೇ ಆಕೆ ವೈಶಾಕ್ ಕುಟುಂಬಸ್ಥರಿಗೆ ತಿಳಿಸಿದ್ದು, ಇದೀಗ ಆತ್ಮಹತ್ಯೆಯ ನಂತರ ಕೃಷಿ ವಿರುದ್ಧವೂ ದೂರು ನೀಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವೈಶಾಕ್ ಪತ್ನಿ ಮೇಘನಾ ದೂರು ದಾಖಲಿಸಲಾಗಿದೆ.

