ರಾಜಕೀಯ ಸಿನಿಮಾ ಸುದ್ದಿ

ತೆಲಂಗಾಣದಲ್ಲಿ ಲೋಕಸಭೆ, ಆಂದ್ರದಲ್ಲಿ ವಿಧಾನಸಭೆ ಚುನಾವಣೆ: ಗಣ್ಯರಿಂದ ಮತದಾನ

Share It

ಹೈದರಾಬಾದ್: ತೆಲಂಗಾಣದಲ್ಲಿ ಲೋಕಸಭೆ ಚುನಾವಣೆ ಹಾಗೂ ಆಂಧ್ರದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಎರಡು ಚುನಾವಣೆಯ ಮತದಾನ ನಡೆಯುತ್ತಿದ್ದು, ಗಣ್ಯಾತಿಗಣ್ಯರು ಮತದಾನ ಮಾಡಿದ್ದಾರೆ.

ನಟರಾದ ಚಿರಂಜೀವಿ, ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್ ತಮ್ಮ ತಮ್ಮ ಮತಕೇಂದ್ರಗಳಲ್ಲಿ ಹಕ್ಕು ಚಲಾಯಿಸಿದರು. ಇವರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ವಿಶೇಷವಾಗಿತ್ತು. ಚಿರಂಜೀವಿ, ಜ್ಯೂನಿಯರ್ ಎನ್‌ಟಿಆರ್ ಪತ್ನಿಸಮೇತರಾಗಿ ಮತಗಟ್ಟೆಗೆ ಆಗಮಿಸಿದ್ದರು.

ಈ ವೇಳೆ ಜ್ಯೂನಿಯರ್ ಎನ್‌ಟಿಆರ್ ಮಾತನಾಡಿ, “ಎಲ್ಲರೂ ತಮ್ಮ ಹಕ್ಕು ಚಲಾಯಿಸಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ಸಂದೇಶ ರವಾನಿಸಬೇಕಿದೆ’ ಎಂದು ತಿಳಿಸಿದರು. ಅಲ್ಲು ಅರ್ಜುನ್ ಮಾತನಾಡಿ, “ಮತದಾನ ಪ್ರತಿಯೊಬ್ಬರ ಹಕ್ಕು. ಮುಂದಿನ ಐದು ವರ್ಷದ ದೇಶದ ಭವಿಷ್ಯಕ್ಕಾಗಿ ಎಲ್ಲರೂ ಮತದಾನ ಮಾಡಿ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗುವ ವಿಶ್ವಾಸವಿದೆ ಎಂದರು.

“ಅಧಿಕೃತವಾಗಿ ನಾನು ಯಾವ ಪಕ್ಷದ ಜೊತೆಗೂ ಗುರುತಿಸಿಕೊಂಡಿಲ್ಲ. ನನ್ನ ಆಪ್ತರು ಮತ್ತು ಸಂಬAಧಿಕರ ಪರವಾಗಿ ಪ್ರಚಾರ ಮಾಡಿದ್ದೇನೆ. ರಾಜಕೀಯ ವಿಚಾರವಾಗಿ ನಾನು ನ್ಯೂಟ್ರಲ್ ಆಗಿದ್ದೇನೆ” ಎಂದು ಅಲ್ಲು ಅರ್ಜುನ್ ಸ್ಪಷ್ಟಪಡಿಸಿದರು.

ಹೈದರಾಬಾದಿನ ಜುಬಿಲಿ ಹಿಲ್ಸ್ನಲ್ಲಿ ಸಿನಿಮಾ ನಿರ್ದೇಶಕ ರಾಜಮೌಳಿ, ಆಸ್ಕರ್ ವಿಜೇತ ಸಂಗೀತ ಸಂಯೋಜಕ ಎಂ.ಎA.ಕೀರವಾಣಿ ಮತ್ತು ನಟ ಶ್ರೀಕಾಂತ್ ಹಕ್ಕು ಚಲಾಯಿಸಿದರು.

ನಾಲ್ಕನೇ ಹಂತದ ಲೋಕಸಭೆ ಮತದಾನ: ೨೦೨೪ರ ಲೋಕಸಭೆ ಚುನಾವಣೆಯ ನಾಲ್ಕನೇ ಹಂತಕ್ಕೆ ಇಂದು ಬೆಳಗ್ಗೆ ೭ ಗಂಟೆಯಿAದ ಮತದಾನ ನಡೆಯುತ್ತಿದೆ. ೯ ರಾಜ್ಯಗಳು, ೧ ಕೇಂದ್ರಾಡಳಿತ ಪ್ರದೇಶದ ೯೬ ಲೋಕಸಭಾ ಕ್ಷೇತ್ರಗಳಲ್ಲಿ ಜನರು ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡುತ್ತಿದ್ದಾರೆ.


Share It

You cannot copy content of this page