ಉಪಯುಕ್ತ ಸುದ್ದಿ

ಟಾಟಾ ಮೋಟರ್ಸ್ ನಿಂದ ಹೊಚ್ಚ ಹೊಸ Tata Ace EV 1000 ಬಿಡುಗಡೆ

Share It

• ಕಟ್ಟಕಡೆ ಮೈಲಿಯ ಸರಕು ಸಾಗಣೆಯ ಸಂಗಾತಿ
• ಇ-ಕಾರ್ಗೊ ಸಾರಿಗೆಯನ್ನು ಇನ್ನಷ್ಟು ಸ್ಮಾರ್ಟರ್ ಮಾಡಲಿದೆ

ಬೆಂಗಳೂರು : ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ಹೊಚ್ಚ ಹೊಸದಾದ ಏಸ್ ಇವಿ 1000 (Ace EV 1000) ಯನ್ನು ಬಿಡುಗಡೆ ಮಾಡುವ ಮೂಲಕ ತನ್ನ ಇ-ಕಾರ್ಗೊ ಸಾರಿಗೆ ಪರಿಹಾರಗಳನ್ನು ಇನ್ನಷ್ಟು ಬಲಪಡಿಸಿಕೊಂಡಿದೆ.

ಕಟ್ಟಕಡೆಯ ಮೈಲಿ ತಲುಪಲು ಪೂರಕವಾಗಿ ಈ ವಾಹನವನ್ನು ಕ್ರಾಂತಿಕಾರಕವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಶೂನ್ಯ ಮಾಲಿನ್ಯ ಹೊರಹೊಮ್ಮುವ ಮಿನಿ ಟ್ರಕ್ ಆಗಿದ್ದು, 1 ಟನ್ ವರೆಗೆ ಪೇಲೋಡ್ ಅನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 161 ಕಿಲೋಮೀಟರ್ ವರೆಗೆ ಕ್ರಮಿಸಬಲ್ಲದು. ತನ್ನ ಗ್ರಾಹಕರಿಂದ ಅತ್ಯಮೂಲ್ಯವಾದ ಸಲಹೆಗಳನ್ನು ಪಡೆದುಕೊಂಡು ಅದಕ್ಕೆ ತಕ್ಕಂತೆ ಈ ಏಸ್ ಇವಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಶ್ರೇಣಿಯ ವಾಹನವು ಎಫ್ಎಂಸಿಜಿ, ಬೇವರೇಜಸ್, ಪೇಂಟ್ಸ್ & ಲ್ಯೂಬ್ರಿಕೆಂಟ್ಸ್, ಎಲ್ ಪಿಜಿ & ಡೈರಿ ಉತ್ಪನ್ನಗಳ ಸಾಗಣೆ ಅಗತ್ಯತೆಗಳನ್ನು ಪೂರೈಸಲಿದೆ.

ದೇಶಾದ್ಯಂತ 150 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್ ಸಪೋರ್ಟ್ ಸೆಂಟರ್ ಗಳ ಬೆಂಬಲದೊಂದಿಗೆ ಈ ಏಸ್ ಇವಿ ವಾಹನವು ಅತ್ಯಾಧುನಿಕ, ಸುಧಾರಿತ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಂ, ಫ್ಲೀಟ್ ಎಡ್ಜ್ ಟೆಲಿಮ್ಯಾಟಿಕ್ಸ್ ಸಿಸ್ಟಂ ಮತ್ತು ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದ ವಾಹನವಾಗಿದೆ. ಟಾಟಾ ಸಮೂಹ ಸಂಸ್ಥೆಗಳ ಅಂಗವಾಗಿರುವ Tata UniEVerse ಅಗಾಧವಾದ ಸಾಮರ್ಥ್ಯಗಳನ್ನು ಬಳಸಿಕೊಂಡು ಈ ಏಸ್ ಇವಿಯನ್ನು ಸಿದ್ಧಪಡಿಸಲಾಗಿದೆ.

ಗ್ರಾಹಕರಿಗೆ ಸಮಗ್ರ ಇ-ಕಾರ್ಗೊ ಮೊಬಿಲಿಟಿ ಪರಿಹಾರವನ್ನು ನೀಡಲು ದೇಶದ ಪ್ರಮುಖ ಹಣಕಾಸು ಸಂಸ್ಥೆಗಳ ಪಾಲುದಾರಿಕೆಯನ್ನೂ ಸಹ ಹೊಂದಲಾಗಿದೆ. ಇದು ಬಹುಮುಖ ಕಾರ್ಗೊ ಡೆಕ್ ಗಳೊಂದಿಗೆ ಲಭ್ಯವಿದೆ ಮತ್ತು ದೇಶಾದ್ಯಂತ ಎಲ್ಲಾ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಡೀಲರ್ ಶಿಪ್ ಗಳಲ್ಲಿ ಮಾರಾಟವಾಗಲಿದೆ.

ಈ ಬಗ್ಗೆ ಮಾತನಾಡಿದ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಎಸ್ ಸಿವಿ & ಪಿಯು ವಿಭಾಗದ ಉಪಾಧ್ಯಕ್ಷ & ಬ್ಯುಸಿನೆಸ್ ಹೆಡ್ ವಿನಯ್ ಪಾಠಕ್ ಅವರು, “ಕಳೆದ ಎರಡು ವರ್ಷಗಳಲ್ಲಿ ನಮ್ಮ ಏಸ್ ಇವಿ ಗ್ರಾಹಕರು ಸರಿಸಾಟಿಯಿಲ್ಲದ ಅನುಭವವನ್ನು ಪಡೆಯುವ ಮೂಲಕ ಅತ್ಯಮೂಲ್ಯ ಪ್ರಯೋಜನಗಳನ್ನು

ಪಡೆದುಕೊಂಡಿದ್ದಾರೆ. ಇದೇ ವೇಳೆ ಅವರು ಲಾಭವನ್ನು ಮತ್ತು ಸುಸ್ಥಿರತೆಯನ್ನು ಪಡೆದುಕೊಂಡಿದ್ದಾರೆ. ಕ್ರಾಂತಿಕಾರಕ ಶೂನ್ಯ ಮಾಲಿನ್ಯದ ಕಟ್ಟಕಡೆಯ ಸಾರಿಗೆ ಪರಿಹಾರಗಳ ರಾಯಭಾರಿಗಳಾಗಿ ಈ ಗ್ರಾಹಕರು ಹೊರಹೊಮ್ಮಿದ್ದಾರೆ. ಇದೀಗ ಏಸ್ ಇವಿ 1000 ಬಿಡುಗಡೆಯೊಂದಿಗೆ ಗ್ರಾಹಕರಿಗೆ ಸುಧಾರಿತ ಅನುಭವವನ್ನು ನೀಡುತ್ತಿದ್ದೇವೆ. ಈ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವುದರೊಂದಿಗೆ ಆರ್ಥಿಕತೆಯನ್ನು ಸುಧಾರಣೆ ಮಾಡಲಾಗುತ್ತಿದೆ. ಏಸ್ ಇವಿ 1000 ಉತ್ಕೃಷ್ಟ ಮೌಲ್ಯ ಮತ್ತು ಕಡಿಮೆ ವೆಚ್ಚದ ಮಾಲೀಕತ್ವವನ್ನು ನೀಡುವ ಮೂಲಕ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ನಮ್ಮದಾಗಿದೆ’’ ಎಂದರು.

ಏಸ್ ಇವಿಯು EVOGEN ಪವರ್ ಟ್ರೇನ್ ನಿಂದ ಚಾಲಿತವಾಗಿದ್ದು, ಇದು 7 ವರ್ಷಗಳ ಬ್ಯಾಟರಿ ವಾರಂಟಿ ಮತ್ತು 5 ವರ್ಷದ ಸಮಗ್ರ ನಿರ್ವಹಣೆ ಪ್ಯಾಕೇಜ್ ನೊಂದಿಗೆ ಸರಿಸಾಟಿಯಿಲ್ಲದ ಚಾಲನಾ ಅನುಭವವನ್ನು ನೀಡುತ್ತದೆ. ಇದು ಚಾಲನಾ ಶ್ರೇಣಿಯನ್ನು ಹೆಚ್ಚಿಸಲು ಸುಧಾರಿತ ಬ್ಯಾಟರಿ ಕೂಲಿಂಗ್ ಸಿಸ್ಟಂ ಮತ್ತು ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಂನೊಂದಿಗೆ ಸುರಕ್ಷಿತ, ಎಲ್ಲಾ ಹವಾಮಾನ ಕಾರ್ಯಾಚರಣೆಗಳನ್ನು ನೀಡುತ್ತದೆ.

ಇದು ಹೆಚ್ಚಿನ ಸಮಯಕ್ಕಾಗಿ ನಿಯಮಿತ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಇದು 27kW (36hp) ಮೋಟರ್ ನಿಂದ 130Nm ಪೀಕ್ ಟಾರ್ಕ್ ನೊಂದಿಗೆ ಚಾಲಿತವಾಗಿದೆ. ಬೆಸ್ಟ್-ಇನ್-ಕ್ಲಾಸ್ ಪಿಕಪ್ ಮತ್ತು ಗ್ರೇಡ್ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಲೋಡ್ ಮಾಡಲಾದ ಪರಿಸ್ಥಿತಿಗಳಲ್ಲಿ ಸುಲಭವಾಗಿ ಸಾಗಲು ಅನುವು ಮಾಡಿಕೊಡುತ್ತದೆ.


Share It

You cannot copy content of this page