ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಬೇಲ್ ಕೊಡುವುದು ತನಿಖೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಎಸ್‌ಐಟಿ ಪರ ವಕೀಲರು ವಾದ ಮಂಡಿಸಿದ್ದಾರೆ.
ಜಾಮೀನು ಅರ್ಜಿ ವಿಚಾಋಣೆಯ ವೇಳೆ ವಾದ ಮಂಡಿಸಿದ, ಎಸ್‌ಐಟಿ ಪರ ವಕೀಲರಾದ ಅಶೋಕ್ ನಾಯಕ್ ಅವರು, ಪ್ರಕರಣದಲ್ಲಿ ಸಂಸ್ತçಸ್ತೆಯನ್ನು ಕಾರಿನಲ್ಲಿ ಎಳೆದೊಯ್ಯಲಾಗಿದೆ. ರೇವಣ್ಣ ಪತ್ನಿ ಆಕೆಯನ್ನು ಕರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಎಲ್ಲ ಅಂಶಗಳನ್ನು ನೋಡಿದರೆ, ತನಿಖೆಯ ದಿಕ್ಕು ತಪ್ಪಿಸುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ಜಾಮೀನು ನೀಡುವುದು ಬೇಡ ಎಂದು ಮನವಿ ಮಾಡಿಕೊಂಡರು.
ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅವರು, ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ, ದೇಶವನ್ನು ತೊರೆದಿದ್ದಾರೆ. ಈವರೆಗೆ ಎಸ್ ಐಟಿ ನೊಟೀಸ್‌ಗೆ ಬೆಲೆ ನೀಡಿ ವಿಚಾರಣೆಗೆ ಹಾಜರಾಗಿಲ್ಲ, ಸಂಸ್ತçಸ್ತೆಯ ಕಡೆಯಿಂದ ವಿಡಿಯೋ ಮಾಡಿಸಿ, ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದು ವಾದ ಮಂಡನೆ ಮಾಡಿದ್ದಾರೆ.
ರಾಹುಕಾಲ ಗುಳಿಕ ಕಾಳ ನೋಡಿ ಹೊಟ್ಟೆ ನೋವು ಎಂದು ಕುಳಿತಿದ್ದರು. ಹೆದರಿಸಿ, ಬೆದರಿಸಿ ಮತ ಹಾಕಿಸಿಕೊಂಡಿದ್ದಾರೆ ಎಂಬ ಆರೋಪಗಳು ಇವರ ಮೇಲಿವೆ. ೨೦೧೯ರಲ್ಲಿ ಚುನಾವಣಾ ಅಕ್ರಮದಲ್ಲಿ ಭಾಗವಹಿಸಿದ್ದರು. ಇವರನ್ನು ಯಾರೂ ಹೇಳುವಂತಿಲ್ಲ, ಕೇಳುವಂತಿಲ್ಲ ಎಂಬ ಸ್ಥಿತಿಯಿದೆ. ಹೀಗಿರುವಾಗ ಸಂತ್ರಸ್ತೆಯ ಪರಿಸ್ಥಿತಿ ಜಾಮೀನು ನೀಡಿದರೆ ಏನಾಗಬೇಡ ಎಂದು ಪ್ರಶ್ನಿಸಿದ್ದಾರೆ.