ನ್ಯಾಯಾಲಯ ಹೆಚ್.ಡಿ ರೇವಣ್ಣ ಅವರಿಗೆ ವಿಧಿಸಿದ ಷರತ್ತುಗಳೇನು?

23
Share It

ಬೆಂಗಳೂರು: ಪೆನ್ ಡ್ರೈವ್ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ಸೆಷನ್ಸ್ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಕೋರ್ಟ್ನ ಷರತ್ತುಗಳಿವು

  • ಇಬ್ಬರ ಶ್ಯೂರಿಟಿ ನೀಡಬೇಕು
  • ೫ ಲಕ್ಷ ರೂಪಾಯಿ ಬಾಂಡ್ ನೀಡಬೇಕು
  • ಸಾಕ್ಷ್ಯಾಧಾರ ನಾಶಪಡಿಸಬಾರದು
  • ಎಸ್‌ಐಟಿ ತನಿಖೆಗೆ ಸಹಕರಿಸಬೇಕು
  • ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕು ಪ್ರವೇಶಿಸುವಂತಿಲ್ಲ

ನಾಳೆ ಬಿಡುಗಡೆ ಸಾಧ್ಯತೆ: ಇಂದು ಜಾಮೀನು ಮಂಜೂರಾದರೂ, ರೇವಣ್ಣ ಅವರಿಗೆ ಇಂದು ಬಿಡುಗಡೆ ಭಾಗ್ಯ ಸಿಗಲಿಲ್ಲ. ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಆದೇಶ ಪ್ರತಿ ತಯಾರಾಗಲು ತಡವಾಗಿದೆ. ಜತೆಗೆ, ಷರತ್ತುಗಳನ್ನು ವಿಧಿಸಿರುವ ಬಾಂಡ್ ಮತ್ತು ಸಾಕ್ಷಿಗಳ ಸಹಿಯನ್ನು ನ್ಯಾಯಾಲಯದ ಮುಂದೆಯೇ ಮಾಡಬೇಕಿರುವ ಕಾರಣಕ್ಕೆ ನಾಳೆ ನ್ಯಾಯಾಲಯದ ಮುಂದೆಯೇ ಇಬ್ಬರು ಸಾಕ್ಷಿಗಳನ್ನು ಕರೆದು, ಅಲ್ಲಿಯೇ ಜಾಮೀನು ಮಂಜೂರು ಮಾಡಿ ನಂತರ ಬಿಡುಗಡೆ ಮಾಡಲಾಗುತ್ತದೆ.


Share It

You may have missed

You cannot copy content of this page