ಅಪರಾಧ ರಾಜಕೀಯ ಸುದ್ದಿ

ಒಂದು ತಿಂಗಳಿಂದ ಶಾಂತಿಯುತವಾಗಿ ಪ್ರತಿಭಟಿಸಿದ್ದೇವೆ: ಈಗ ಬಿಜೆಪಿ ಗೂಂಡಾಗಳು ಸೇರಿ ಗಲಾಟೆ ಮಾಡಿದ್ದಾರೆ

Share It

ನವದೆಹಲಿ:ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿಯೇ ಬಿಜೆಪಿಯ ಕಡೆಯಿಂದ ಕೆಲವು ಗುಂಡಾಗಳು ಸೇರಿಕೊಂಡು ಗಲಾಟೆ ಮಾಡಿದ್ದಾರೆ ಎಂದು ಕಾಕ್ರೋಚ್ ಪಾರ್ಟಿ ಮುಖ್ಯಸ್ಥ ಹಾಗೂ ವಿದ್ಯಾರ್ಥಿ ಹೋರಾಟದ ರುವಾರಿ ದೀಪಕ್ ಫಡ್ಕೆ ತಿಳಿಸಿದ್ದಾರೆ.

ನಾವು ಒಂದು ತಿಂಗಳಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಇದರೊಳಗೆ ಕೆಲವು ಬಿಜೆಪಿ ಗುಂಡಾಗಳು ಪ್ರತಿಭಟನೆ ಹತ್ತಿಕ್ಕುವ ಸಲುವಾಗಿ ಸೇರಿಕೊಂಡು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ಮಾತುಕತೆಗೆ ಕರೆದಿದ್ದು, ನೀವು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಂತರ್ ಮಂತರ್ ಯಾವಾಗಲೂ ತೆರೆದೇ ಇರುತ್ತದೆ. ಯಾವುದೇ ನಾಯಕರು ಬಂದು ನಮ್ಮೊಂದಿಗೆ ಚರ್ಚೆ ಮಾಡಬಹುದು. ಎಲ್ಲವೂ ವಿದ್ಯಾರ್ಥಿಗಳ ಎದುರಿಗೆ ಚರ್ಚೆಯಾಗಲಿ, ನಾವು ನಮ್ಮ ಬೇಡಿಕೆಗಳಿಗಷ್ಟೇ ಬದ್ಧವಾಗಿದ್ದೇವೆ ಎಂದು ತಿಳಿಸಿದರು.


Share It

You cannot copy content of this page