ನವದೆಹಲಿ:ಧರ್ಮಸ್ಥಳದಲ್ಲಿ ಕೊಲೆಯಾದ ಸೌಜನ್ಯಾ ಪ್ರಕರಣದಲ್ಲಿ ಸಿಬಿಐ ವೈಫಲ್ಯವನ್ನು ಖಂಡಿಸಿರುವ ಸುಪ್ರೀಂ ಕೋರ್ಟ್, ಮರುತನಿಖೆಯ ಆದೇಶವನ್ನು ಕಾಯ್ದಿರಿಸಿದೆ.
ನ್ಯಾಯಾಲಯವು ಸಿಬಿಐ ತನಿಖೆಯು ಕಳಪೆಯಾಗಿತ್ತಲ್ಲದೆ, ಸ್ವತಂತ್ರವಾಗಿರಲಿಲ್ಲ, ತನಿಖಾಧಿಕಾರಿಗಳು ನ್ಯಾಯಾಧೀಶರಂತೆ ವರ್ತಿಸಿ, ಹಳೆಯ ಸಾಕ್ಷ್ಯಗಳನ್ನೇ ಪರಿಗಣಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ, ಸಿಬಿಐ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ ಮತ್ತು ಸೌಜನ್ಯಾ ಅವರ ತಾಯಿಯ ಹೇಳಿಕೆಯನ್ನೇ ದಾಖಲಿಸಿಕೊಂಡಿಲ್ಲ ಎಂಬ ಲೋಪಗಳನ್ನು ಎತ್ತಿತೋರಿಸಿದೆ.
ಪ್ರಕರಣದ ಮರು ತನಿಖೆಗೆ ಎಸ್‌ಐಟಿ ರಚನೆ ಮಾಡುವ ಸಂಬಂಧ ಇರುವ ಸಾಧ್ಯತೆಗಳನ್ನು ಸುಪ್ರೀಂ ಕೋರ್ಟ್ ಸೂಚಿಸಿದ್ದು, ರಾಜ್ಯ ಸರಕಾರಕ್ಕೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಸೂಚನೆ ನೀಡಿದೆ. 2015ರಲ್ಲೇ ತನಿಖೆ ಪೂರ್ಣಗೊಂಡಿದ್ದು, ಈಗ ಹೊಸ ತನಿಖೆ ಸಾಧ್ಯವಿಲ್ಲ ಎಂದು ಸಿಬಿಐ ವಾದಿಸಿತ್ತು. ವಾದವನ್ನು ಖಂಡಿಸಿದ ನ್ಯಾಯಾಲಯ ಸಿಬಿಐಗೆ ತಪರಾಕಿ ನೀಡಿದೆ.
2013ರಲ್ಲಿ ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸಲಾಗಿತ್ತು. 2015ರಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿಕೊಂಡು, ತನಿಖೆ ಆರಂಭಿಸಿದ್ದು, ಪುರಾವೆಗಳನ್ನು ಪತ್ತೆ ಹಚ್ಚಲು ಸುಮಾರು 12 ವರ್ಷಗಳ ಸಮಯವನ್ನು ತೆಗೆದುಕೊಂಡಿತ್ತು. ಈ ಸಂದರ್ಭದ ವೈಫಲ್ಯಗಳ ಕುರಿತು ಸೌಜನ್ಯಾ ಅವರ ತಾಯಿ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

