ಬೆಂಗಳೂರು: ರಾಜಧಾನಿಯಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ಗ್ಯಾರೇಜು ಸುಟ್ಟು ಭಸ್ಮವಾಗಿದ್ದು, 20 ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಬೆಂಕಿಗೆ ಆಹುತಿಯಾಗಿವ ಘಟನೆ ನಡೆದಿದೆ.
ಥಣಿಸಂದ್ರ ಮುಖ್ಯರಸ್ತೆಯ ಭಾರತೀಯ ಸಿಟಿ ಬಳಿಯಿರುವ ಗ್ಯಾರೇಜು ವೊಂದರಲ್ಲಿ ಬೆಳಗಿನ ಜಾವಾ ಸುಮಾರು 4 ಗಂಟೆಗೆ ಅವಘಡ ಸಂಭವಿಸಿದೆ. ರಿಪೇರಿಗಾಗಿ ತಂದಿದ್ದ ಜಾಗ್ವಾರ್, ರೇಂಜ್ ರೋವರ್ ಸೇರಿ 20 ಕಾರುಗಳು ಬೆಂಕಿಗೆ ಆಹುತಿಯಾಗಿವೆ.
ಗ್ಯಾರೇಜು ಪಕ್ಕದ ಶೆಡ್ ಗೂ ಬೆಂಕಿ ತಗುಲಿದ್ದು, 8 ಆಟೋಗಳು ಸಹ ಬೆಂಕಿಗೆ ಆಹುತಿಯಾಗಿವೆ. ಗ್ಯಾರೇಜು ಸಮೀಪದ ಫ್ಯಾಕ್ಟರಿಗೂ ಬೆಂಕಿ ಆವರಿಸಿದ್ದು, 2 ಲಕ್ಷ ರು ಮೌಲ್ಯದ ಪೀಠೋಪಕರಣಗಳು ನಾಲ್ಕು ಲಕ್ಷ ಬೆಲೆಬಾಳುವ ಯಂತ್ರಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಘಟನೆ ಸ್ಥಳಕ್ಕೆಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.

