ಅಪರಾಧ ಸುದ್ದಿ

ಬೆಂಗಳೂರು: ಗ್ಯಾರೇಜ್ ನಲ್ಲಿ ಅಗ್ನಿ ಅವಘಡ: ಜಾಗ್ವಾರ್, ರೇಂಜ್ ರೋವರ್ ಸೇರಿ 20 ಕ್ಕೂ ಹೆಚ್ಚು ಕಾರುಗಳು ಭಸ್ಮ

Share It

ಬೆಂಗಳೂರು: ರಾಜಧಾನಿಯಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ಗ್ಯಾರೇಜು ಸುಟ್ಟು ಭಸ್ಮವಾಗಿದ್ದು, 20 ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಬೆಂಕಿಗೆ ಆಹುತಿಯಾಗಿವ ಘಟನೆ ನಡೆದಿದೆ.

ಥಣಿಸಂದ್ರ ಮುಖ್ಯರಸ್ತೆಯ ಭಾರತೀಯ ಸಿಟಿ ಬಳಿಯಿರುವ ಗ್ಯಾರೇಜು ವೊಂದರಲ್ಲಿ ಬೆಳಗಿನ ಜಾವಾ ಸುಮಾರು 4 ಗಂಟೆಗೆ ಅವಘಡ ಸಂಭವಿಸಿದೆ. ರಿಪೇರಿಗಾಗಿ ತಂದಿದ್ದ ಜಾಗ್ವಾರ್, ರೇಂಜ್ ರೋವರ್ ಸೇರಿ 20 ಕಾರುಗಳು ಬೆಂಕಿಗೆ ಆಹುತಿಯಾಗಿವೆ.

ಗ್ಯಾರೇಜು ಪಕ್ಕದ ಶೆಡ್ ಗೂ ಬೆಂಕಿ ತಗುಲಿದ್ದು, 8 ಆಟೋಗಳು ಸಹ ಬೆಂಕಿಗೆ ಆಹುತಿಯಾಗಿವೆ. ಗ್ಯಾರೇಜು ಸಮೀಪದ ಫ್ಯಾಕ್ಟರಿಗೂ ಬೆಂಕಿ ಆವರಿಸಿದ್ದು, 2 ಲಕ್ಷ ರು ಮೌಲ್ಯದ ಪೀಠೋಪಕರಣಗಳು ನಾಲ್ಕು ಲಕ್ಷ ಬೆಲೆಬಾಳುವ ಯಂತ್ರಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಘಟನೆ ಸ್ಥಳಕ್ಕೆಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.


Share It

You cannot copy content of this page