ರಾಜಕೀಯ ಸುದ್ದಿ

ಅಧಿಕಾರದ ಪಿತ್ತ ನೆತ್ತಿಗೇರಿದೆ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ

Share It

ಸ್ಟಿಂಗ್ ಪ್ರಕರಣದಲ್ಲಿ ಈಗಿನ ತನಿಖೆ ಮೇಲಿಲ್ಲ ವಿಶ್ವಾಸ: ಪೊಲೀಸ್ ಕಮಿಷನರ್ ರಾಜಕೀಯ ಹೇಳಿಕೆ; ಸಚಿವರ ಆಕ್ರೋಶ

ನವದೆಹಲಿ: ಕರ್ನಾಟಕದಲ್ಲಿ ಸದ್ಯ ಚರ್ಚೆಯಲ್ಲಿರುವ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಪೊಲೀಸ್ ಆಯುಕ್ತರ ಹೇಳಿಕೆಗಳನ್ನು ನೋಡಿದರೆ ಬಹುಶಃ ಇವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದಂತೆ ಕಾಣುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.

ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಸ್ಟಿಂಗ್ ಪ್ರಕರಣದಲ್ಲಿ ಗೃಹ ಸಚಿವರಂತೆ ಪೊಲೀಸ್ ಆಯುಕ್ತರು ಕೂಡ ಸರಿಯಾದ ತನಿಖೆ ನಡೆಸೋದು ಬಿಟ್ಟು ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಪೊಲೀಸ್ ಆಯುಕ್ತರು ಮಾತು ನೋಡಿದರೆ ಇಬ್ಬರಿಗೂ ಅಧಿಕಾರದ ಪಿತ್ತ ನೆತ್ತಿಗೇರಿದಂತಿದೆ ಎಂದು ಜೋಶಿ ಗರಂ ಆಗಿಯೇ ಪ್ರತಿಕ್ರಿಯಿಸಿದರು.

ಸ್ಟಿಂಗ್ ಆಪರೇಷನ್ ತನಿಖೆ ಮೇಲಿಲ್ಲ ವಿಶ್ವಾಸ: ಸ್ಟಿಂಗ್ ಆಪರೇಷನ್ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪುತ್ರ ಹಾಗೂ ಕಾಂಗ್ರೆಸ್ ಮುಖಂಡರ ಹೇಳಿಕೆಗಳನ್ನು ಪ್ರಸ್ತಾಪಿಸಿದ ಸಚಿವ ಜೋಶಿ, “ಇದರ ನ್ಯಾಯಯುತ ತನಿಖೆ ನಡೆಯಬೇಕು. ಆದರೆ, ಈಗಿನ ತನಿಖೆ ಮೇಲೆ . ಯಾವುದೇ ವಿಶ್ವಾಸವಿಲ್ಲ ಎಂದೇ ಹೇಳಿದರು.

ಸ್ಟಿಂಗ್ ಆಪರೇಶನ್ ಮಾಡಿದವರು ಯಾರು? ಮತ್ತು ಮಾಡಿಸಿದವರು ಯಾರು? ಒಟ್ಟಾರೆ ಈ ಪ್ರಕರಣ ಕಾಂಗ್ರೆಸ್ ಪಕ್ಷದ ಘನತೆಗೆ ಧಕ್ಕೆ ತಂದಿದೆ” ಎಂದು ನೇರ ವಾಗ್ದಾಳಿ ನಡೆಸಿದರು.

ಬೆಂಗಳೂರು ಪೊಲೀಸ್ ಆಯುಕ್ತರ ವಿರುದ್ಧ ತೀವ್ರ ಆಕ್ರೋಶ: ಬೆಂಗಳೂರು ಪೊಲೀಸ್ ಆಯುಕ್ತರ ಹೇಳಿಕೆ ನೋಡಿದರೆ ಅವರು ಕಮಿಷನರೇ ಅಥವಾ ಕಾನ್‌ಸ್ಟೇಬಲ್‌ ಥರ ಇದ್ದಾರಾ? ಎಂಬ ಪ್ರಶ್ನೆ ಮೂಡುತ್ತದೆ. ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದ ಇವರಿಗೆ ಗಾಬರಿ ಆಗಿರಬೇಕು. ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಇದು ಐಪಿಎಸ್ ಅಧಿಕಾರಿಗೆ ತಕ್ಕುದಲ್ಲ ಎಂದು ಎಚ್ಚರಿಸಿದ ಸಚಿವ ಜೋಶಿ, ರಾಜಧಾನಿ ಬೆಂಗಳೂರಿನಂತಹ ಪ್ರದೇಶಕ್ಕೆ ಇವರು ಅತ್ಯಂತ ಅಸಮರ್ಥ ಮತ್ತು ಅನರ್ಹ ಪೊಲೀಸ್ ಆಯುಕ್ತರು ಎಂದೇ ತೀವ್ರ ತರಾಟೆಗೆ ತೆಗೆದುಕೊಂಡರು.

ಮೋದಿ ಸರ್ಕಾರದಿಂದ ಆಡಳಿತಾತ್ಮಕ ಸುಧಾರಣೆ: ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ವಿವರಿಸಿದ ಸಚಿವ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐಪಿಎಸ್, ಐಎಎಸ್ ಹಾಗೂ ಐಎಫ್ಎಸ್ ಸೇರಿದಂತೆ ವಿವಿಧ ಸೇವಾ ಅಧಿಕಾರಿಗಳಿಗೆ ಕೇಂದ್ರದಲ್ಲಿ ಜಾಯಿಂಟ್ ಸೆಕ್ರೆಟರಿ ಮತ್ತು ಅಡಿಷನಲ್ ಸೆಕ್ರೆಟರಿಯಂತಹ ಉನ್ನತ ಹುದ್ದೆಗಳಲ್ಲಿ ಅವಕಾಶ ಕಲ್ಪಿಸುವ ಐತಿಹಾಸಿಕ ಬದಲಾವಣೆಗಳನ್ನು ತರಲಾಗಿದೆ ಎಂದು ತಿಳಿಸಿದರು.


Share It

You cannot copy content of this page