ರಾಜಕೀಯ ಸುದ್ದಿ

ಸಿದ್ದರಾಮಯ್ಯಗೆ ಯಾವುದೇ ಅಸಮಾಧಾನವಿಲ್ಲ: ಹೈಕಮಾಂಡ್ ತೀರ್ಮಾನ ಪಾಲಿಸಲಾಗಿದೆ: ಸಿಎಂ ಡಿಕೆಶಿ

Share It

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಯಾವುದೇ ಅಸಮಾಧಾನವಿಲ್ಲ, ನಾವೆಲ್ಲ ಒಂದಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರು ಹಾಜರಾದ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನು, ಸಿದರಾಮಯ್ಯ ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಇಂದು ಅವರ ಜನ್ಮದಿನ. ಅವರಿಗೆ ಅನೇಕ ಅತಿಥಿಗಳು ಶುಭಕೋರುತ್ತಿದ್ದಾರೆ. ನಾನು ಶುಭ ಕೋರಿದ್ದೇನೆ. ನಾವೆಲ್ಲರೂ ಒಂದು ತಂಡ 139 ಶಾಸಕರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಯಾಕೆ ಅಸಮಾಧಾನಗೊಳ್ಳುತ್ತಾರೆ?. ನಾನು ಸೇರಿದಂತೆ ಎಲ್ಲರೂ ಸಿದ್ದರಾಮಯ್ಯನವರ ಕಡೆಯವರೇ. ನಾವು ಒಂದಾಗಿದ್ದೇವೆ, ಒಂದಾಗಿರುತ್ತೇವೆ. ಒಂದಾಗಿ ಹೋರಾಟ ಮಾಡುತ್ತೇವೆ. ನೀವುಗಳು ಹೊಸದಾಗಿ ಹುಡುಕುತ್ತಿದ್ದೀರಿ. ಅನೇಕರು ಅವರನ್ನು ಭೇಟಿ ಮಾಡುತ್ತಿರುತ್ತಾರೆ. ಸಚಿವ ಸ್ಥಾನ ಸಿಗದವರ ಜತೆಗೂ ಅವರು ಮಾತನಾಡುತ್ತಿರುತ್ತಾರೆ. ಅವರು ನಮ್ಮ ಪಕ್ಷದ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಹೊಸ ಮುಖಗಳಿಗೆ ಅವಕಾಶ: ಸುಮಾರು 2 ಗಂಟೆಗಳ ಕಾಲ ಸಚಿವ ಸಂಪುಟದ ನೂತನ ಸದಸ್ಯರಿಗೆ ಮಾರ್ಗದರ್ಶನ ನೀಡಿದ್ದೇವೆ. ನಮ್ಮಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದರೂ ನಾವು ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ. ನಾನು ಹಾಗೂ ಪರಮೇಶ್ವರ್ ಅವರು ಮೊದಲ ಬಾರಿಗೆ ಶಾಸಕರಾಗಿ ಮಂತ್ರಿಯಾಗಿದ್ದೇವೆ. ಕೆಲವು ಸಂದರ್ಭದಲ್ಲಿ ನಮ್ಮನ್ನು ಸಚಿವರನ್ನಾಗಿ ಮಾಡಿದ್ದಾರೆ. ಕೆಲವೊಮ್ಮೆ ಮಾಡಿಲ್ಲ. ನಾವು ಅಲ್ಲಿಂದ ಇಲ್ಲಿಯವರೆಗೆ ಬಂದು ಈ ಸ್ಥಾನ ತಲುಪಿದ್ದೇವೆ. ಇಂದು 19 ಸದಸ್ಯರು ಸಂಪುಟ ಸೇರ್ಪಡೆಯೊಂದಿಗೆ ವಿಸ್ತರಣೆಯಾಗಿದೆ. ನಮ್ಮಲ್ಲಿ ಅನೇಕ ಅರ್ಹರು ಇದ್ದರು. ನಮ್ಮಲ್ಲಿ ಅರ್ಹತೆ ಇಲ್ಲದವರು ಯಾರೂ ಇಲ್ಲ ಎಂದರು.


Share It

You cannot copy content of this page