ರಾಜಕೀಯ ಸುದ್ದಿ

ರಾಜೀನಾಮೆ ಬೆದರಿಕೆ ಹಾಕಿದ ಶಾಸಕರ ವಿವರ ಕೇಳಿದ ಹೈಕಮಾಂಡ್

Share It

ಬೆಂಗಳೂರು: ಸಚಿವ ಸ್ಥಾನ ಸಿಗದಿರುವ ಕಾರಣಕ್ಕೆ ಕೆಲವು ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ್ದು, ಮತ್ತಷ್ಟು ಜನ ರಾಜೀನಾಮೆ ನೀಡುವ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ಬೆದರಿಕೆ ಹಾಕಿದ ಶಾಸಕರ ವಿವರ ನೀಡುವಂತೆ ಹೈಕಮಾಂಡ್ ಸಿಎಂಗೆ ಸೂಚಿಸಿದೆ ಎನ್ನಲಾಗಿದೆ.

ವಿಜಯನಗರ ಶಾಸಕ ಕೃಷ್ಣಪ್ಪ, ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ, ಕೊಪ್ಪಳದ ರಾಘವೇಂದ್ರ ಹಿತ್ನಾಳ್, ಮೈಸೂರಿನ ತನ್ವೀರ್ ಸೇಠ್ ಸೇರಿ ಕೆಲವು ಪ್ರಮುಖ ಆಕಾಂಕ್ಷಿಗಳು ಬೇಸರಗೊಂಡು ರಾಜೀನಾಮೆಯ ಮಾತುಗಳನ್ನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ಬೆದರಿಕೆ ಹಾಕಿದವರ ವಿವರ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್ ಅವರ ಸಂಪುಟಕ್ಕೆ ಬಹುತೇಕ ಹೊಸಬರೇ ಸೇರಿದ್ದು, ಇದೊಂದು ಡಮ್ಮಿ ಕ್ಯಾಬಿನೆಟ್ ಎಂದು ಕೆಲವರು ಜರಿದಿದ್ದಾರೆ. ಈ ನಡುವೆ ನಿರೀಕ್ಷೆಯಿಟ್ಟುಕೊಂಡಿದ್ದ ಪ್ರಮುಖ ನಾಯಕರಿಗೆ ಸಚಿವ ಸ್ಥಾನ ಮಿಸ್ ಆಗಿದೆ. ಈ ಹಿನ್ನೆಲೆಯಲ್ಲಿ ಕೆಲವರು ನೆನ್ನೆಯೇ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ನಡುವೆ ಮತ್ತಷ್ಟು ಜನ ಪರಿಸ್ಥಿತಿ ನೋಡಿಕೊಂಡು ರಾಜೀನಾಮೆ ಕುರಿತು ಚಿಂತನೆ ನಡೆಸಿದ್ದರು.


Share It

You cannot copy content of this page