ಬೆಂಗಳೂರು: ರಾಜ್ಯದಲ್ಲಿರುವ ಬರ ಮತ್ತು ನೆರೆ ಪರಿಸ್ಥಿತಿಯ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾವಾರು ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ತುಮಕೂರು ಜಿಲ್ಲೆಗೆ ಡಿಸಿಎಂ ಡಾ. ಜಿ ಪರಮೇಶ್ವರ್, ಬೆಂಗಳೂರು ದಕ್ಷಿಣಕ್ಕೆ ಬಾಲಕೃಷ್ಣ, ಕೋಲಾರ ಜಿಲ್ಲೆಗೆ ರಾಮಲಿಂಗಾ ರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲೆಗೆ ಬೈರತಿ ಸುರೇಶ್, ಗದಗಕ್ಕೆ ಬಸವರಾಜ ರಾಯರಡ್ಡಿ, ಬೆಳಗಾವಿ ಜಿಲ್ಲೆಗೆ ಸತೀಶ್ ಜಾರಕಿಹೊಳಿ ಅವರನ್ನು ನೇಮಿಸಲಾಗಿದೆ.
ಪಿ.ಎಂ ನರೇಂದ್ರ ಸ್ವಾಮಿ, ಕೊಡಗು, ಈಶ್ವರ್ ಖಂಡ್ರೆ ಬೀದರ್, ಜಮೀರ್ ಅಹಮದ್ ಅವರಿಗೆ ವಿಜಯನಗರ, ರಘುಮೂರ್ತಿ ಅವರನ್ನು ಚಿತ್ರದುರ್ಗದ ಉಸ್ತುವಾರಿಯನ್ನಾಗಿ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರಕ್ಕೆ ಕೆ.ಎಚ್.ಮುನಿಯಪ್ಪ, ಚಿಕ್ಕಮಗಳೂರು ಜಿಲ್ಲೆಗೆ ಕೆ.ಜೆ.ಜಾರ್ಜ್, ಹಾಸನ ಜಿಲ್ಲೆಗೆ ಕೆ.ಎಂ ಶಿವಲಿಂಗೇಗೌಡ, ಶಿವಮೊಗ್ಗಕ್ಕೆ ಮಧು ಬಂಗಾರಪ್ಪ, ವಿಜಯಪುರ ಜಿಲ್ಲೆಗೆ ಎಂ.ಬಿ.ಪಾಟೀಲ್, ಬಾಗಲಕೋಟ ಜಿಲ್ಲೆಗೆ ವಿಜಯಾನಂದ ಕಾಶಪ್ಪನವರ್, ದಾವಣಗೆರೆ ಜಿಲ್ಲೆಗೆ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ನೇಮಿಸಲಾಗಿದೆ.
ಹಾವೇರಿ ಜಿಲ್ಲೆಗೆ ರುದ್ರಪ್ಪ ಲಮಾಣಿ, ಧಾರವಾಡಕ್ಕೆ ಸಂತೋಷ್ ಲಾಡ್, ಉತ್ತರ ಕನ್ನಡ ಜಿಲ್ಲೆಗೆ ಲಕ್ಷ್ಮಣ್ ಸವದಿ, ಕಲಬುರಗಿ ಜಿಲ್ಲೆಗೆ ಪ್ರಿಯಾಂಕ್ ಖರ್ಗೆ, ರಾಯಚೂರು ಜಿಲ್ಲೆಗೆ ಅಜಯ್ ಸಿಂಗ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಯು.ಟಿ ಖಾದರ್, ಮೈಸೂರಿಗೆ ಯತೀಂದ್ರ ಸಿದ್ದರಾಮಯ್ಯ ವರನ್ನು ನೇಮಿಸಲಾಗಿದೆ.
ಮಂಡ್ಯ ಜಿಲ್ಲೆಗೆ ಚಲುವರಾಯಸ್ವಾಮಿ, ಚಾಮರಾಜನಗರ ಜಿಲ್ಲೆಗೆ ಪುಟ್ಟರಂಗಶೆಟ್ಟಿ, ಬಳ್ಳಾರಿ ಜಿಲ್ಲೆಗೆ ನಾಗೇಂದ್ರ, ಯಾದಗಿರಿ ಜಿಲ್ಲೆಗೆ ಶರಣ ಪ್ರಕಾಶ್ ಪಾಟೀಲ್, ಕೊಪ್ಪಳ ಜಿಲ್ಲೆಗೆ ಶಿವರಾಜ್ ತಂಗಡಗಿ ಹಾಗೂ ಬೆಂಗಳೂರು ನಗರ ಜಿಲ್ಲೆಗೆ ಕೃಷ್ಣ ಬೈರೇಗೌಡ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

