ಬೆಂಗಳೂರು: ಇಂತಹ ಸಂಪುಟ ರಚನೆ ಮಾಡಲು ಎರಡು ತಿಂಗಳ ಕಾಲ ತೆಗೆದುಕೊಳ್ಳಬೇಕಿತ್ತಾ, ಸಿದ್ದರಾಮಯ್ಯ ಬೆಂಬಲಿಗರು ಎಂಬ ಕಾರಣಕ್ಕೆ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಮಾಜಿ ಸಚಿವ ಎಂ.ಸಿ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರದ ಶಾಸಕರು ಸೇರಿ ಸಭೆ ನಡೆಸಿದ್ದು, ಸಿಎಂ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ. ರಾಜೀನಾಮೆ ಕೊಡುವವರು ಕೊಟ್ಟು ಹೋಗಿ ಎಂದು ಸಿಎಂ ಹೇಳುತ್ತಿದ್ದಾರೆ. ಅದು ಅವರ ಸ್ಟೈಲ್, ಅವರು ಹೇಳಿಕೊಳ್ಳಲಿ, ನಾವೆಲ್ಲರೂ ಸ್ವಶ್ರಮದಿಂದ ಗೆಲುವು ಸಾಧಿಸುವವರು, ನಮ್ಮನ್ನು ಹೈಕಮಾಂಡ್ ಕಡೆಗಣಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಬ್ಬರೂ ಸಚಿವರಾಗಲು ಯೋಗ್ಯರಾದವರು ಇಲ್ಲವೇ? ಸಿದ್ದರಾಮಯ್ಯ ಅವರ ಮಾತಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಕಿಮ್ಮತ್ತು ಸಿಕ್ಕಿಲ್ಲ, ಅವರನ್ನು ಮುಂಧಿನ ದಿನಗಳಲ್ಲಿ ಯಾವ ರೀತಿ ನಡೆಸಿಕೊಳ್ಳಲಾಗುತ್ತದೆ ಎಂಬುದು ಇಲ್ಲೇ ಗೊತ್ತಾಗುತ್ತದೆ. ಪಕ್ಷದಲ್ಲಿ ಸಿದ್ದರಾಮಯ್ಯ ಅವರ ತ್ಯಾಗಕ್ಕೆ ಬೆಲೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

