ಉಪಯುಕ್ತ ಸುದ್ದಿ

ಮೈಸೂರು ದಸರಾ 2026: ಅಭಿಮನ್ಯುವಿನ ಅಮೂಲ್ಯ ಸೇವೆಗೆ ಸರ್ಕಾರದ ವಿಶೇಷ ಗೌರವ: ಸಚಿವ ರಾಮಲಿಂಗಾ ರೆಡ್ಡಿ ಸೂಚನೆ

Share It

ಬೆಂಗಳೂರು: ಹಲವು ವರ್ಷಗಳ ಕಾಲ ಅಂಬಾರಿ ಹೊರುವ ಮೂಲಕ ಘನತೆಗೆ ಕಾರಣವಾಗಿದ್ದ ಅಭಿಮನ್ಯುವಿಗೆ ಅಂಬಾರಿ ಹೊರುವ ಹೊಣೆಗಾರಿಕೆಗೆ ವಿದಾಯ ನೀಡಿದ್ದು, ಆತನಿಗೆ ಗೌರವಯುತ ಬೀಳ್ಕೊಡುಗೆ ನೀಡಲು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ. 

ಈ ಮೂಲಕ ಟ್ವೀಟ್ ಮಾಡಿರುವ ಅವರು, ಹಲವು ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಗಾಂಭೀರ್ಯದಿಂದ ಹೊತ್ತು ಕರುನಾಡಿನ ಜನರ ಮನಗೆದ್ದ ಅಭಿಮನ್ಯುವಿನ ಸುದೀರ್ಘ ಸೇವೆಯನ್ನು ಗೌರವಿಸಿ, ಈ ಬಾರಿಯ ಮೈಸೂರು ದಸರಾ-2026ರ ಜಂಬೂಸವಾರಿಯಲ್ಲಿ ಅಭಿಮನ್ಯುವಿಗೆ ಸಕಲ ಸರ್ಕಾರಿ ಗೌರವಗಳನ್ನು ನೀಡಿ, ‘ನಿಶಾನೆ ಆನೆ’ಯನ್ನಾಗಿ ಗೌರವಪೂರ್ವಕವಾಗಿ ಮುಂಚೂಣಿಯಲ್ಲಿ ಮುನ್ನಡೆಸಲು ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ. 

ದಸರಾ ಗಜಪಡೆಯ ಹಿರಿಮೆ ಅಭಿಮನ್ಯು, ಎಂದೆಂದಿಗೂ ನಮ್ಮ ಹೆಮ್ಮೆ ಎಂದು ತಿಳಿಸಿರುವ ಅವರು ದಸರಾದಲ್ಲಿ ಜನರ ಗಮನ ಸೆಳೆದು ಪ್ರೀತಿ, ಅಭಿಮಾನ ಗಳಿಸಿದ್ದ ಅಭಿಮನ್ಯುಗೆ ಭಾವಪೂರ್ಣ ಮತ್ತು ಗೌರವ ಪೂರ್ಣ ವಿದಾಯ ನೀಡಲು ಸರಕಾರ ತೀರ್ಮಾನಿಸಿದೆ. 


Share It

You cannot copy content of this page