ಆರೋಗ್ಯ ಉಪಯುಕ್ತ ಸುದ್ದಿ

Shravana Belagola: ಗಣೇಶ ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ 

Share It

ಶ್ರವಣ ಬೆಳಗೊಳ: ಶ್ರವಣ ಬೆಳಗೊಳ ಹೋಬಳಿಯ ಬಿ ಚೋಳೇನಹಳ್ಳಿ ಗ್ರಾಮದ ಶ್ರೀ ಪ್ರಸನ್ನ ಗಣಪತಿ ಏಕದಂತ ಗೆಳೆಯರ ಬಳಗದ ವತಿಯಿಂದ ಎರಡನೇ ವರ್ಷದ ಗಣೇಶ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣ ಶಿಬಿರವನ್ನು ಆಯೋಜನೆ ಮಾಡಲಾಗಿದೆ. 

ಬೆಂಗಳೂರಿನ ಪ್ರಸಿದ್ಧ ಯೂನಿಟಿ ಲೈಫ್ ಲೈನ್ ಆಸ್ಪತ್ರೆಯ ವೈದ್ಯರು  ಮನುಷ್ಯ ದೇಹದ ಎಲ್ಲ ಅಂಗಗಳ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಕಣ್ಣಿನ ತಪಾಸಣೆ ನಡೆಸಿ, ಕೆಲವು ಕಾಯಿಲೆಗಳಿಗೆ ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡಲಿದ್ದಾರೆ. 16 ಸೆಪ್ಟೆಂಬರ್ ಬುಧವಾರದಂದು ಬೆಳಗ್ಗೆ 9 ಗಂಟೆಯಿಂದ ಸಂಜೆ ಮೂರು ಗಂಟೆವರೆಗೆ ತಪಾಸಣಾ ಶಿಬಿರ ನಡೆಯಲಿದೆ. 

ಶ್ರಾವಣ ಬೆಳಗೊಳ ಹೋಬಳಿಯ ಸುತ್ತಲಿನ ಗ್ರಾಮಗಳ ಜನರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಆಯೋಜಕರು ವಿನಂತಿಸಿಕೊಂಡಿದ್ದಾರೆ. ನೋಂದಣಿ ಹಾಗೂ ಹೆಚ್ಚಿನ ವಿವರಗಳಿಗೆ ಆಯೋಜಕರ ದೂರವಾಣಿ ಸಂಖ್ಯೆ 7760200391 ಹಾಗೂ 9242159509 ಗೆ ಸಂಪರ್ಕಿಸಬಹುದು. 


Share It

You cannot copy content of this page