ರಾಜಕೀಯ ಸುದ್ದಿ

ಸೌದಿ – ಹೌತಿ ಸಂಘರ್ಷ; ರಿಯಾದ್​ ಏರ್​​ಪೋರ್ಟ್​ ದಾಳಿಯಲ್ಲಿ 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Share It

ರಿಯಾದ್​: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದರೆ, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರವು ಭಾನುವಾರ ಬೆಳಗ್ಗೆ ತಿಳಿಸಿದೆ. ನೆರೆಯ ಯೆಮೆನ್‌ನಲ್ಲಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರೇ ಈ ದಾಳಿಗೆ ಕಾರಣ ಎಂದು ಸೌದಿ ನೇತೃತ್ವದ ಮೈತ್ರಿಕೂಟ ಆರೋಪಿಸಿದೆ.

ಹೌತಿಗಳು ಮತ್ತು ಸೌದಿ ಬೆಂಬಲಿತ ಯೆಮೆನ್ ಸರ್ಕಾರಿ ಪಡೆಗಳ ನಡುವೆ ತೀವ್ರಗೊಂಡ ಸಂಘರ್ಷದ ಭಾಗವಾಗಿ, ಗಲ್ಫ್ ಅರಬ್ ದೇಶವೊಂದರಲ್ಲಿ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದೆ. ದೇಶೀಯ ವಿಮಾನಗಳಿಗಾಗಿ ಟರ್ಮಿನಲ್ 3 ಮತ್ತು 4 ಅನ್ನು ಹೊಂದಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಕೀರ್ಣಕ್ಕೆ ಕ್ಷಿಪಣಿಯೊಂದು ಅಪ್ಪಳಿಸಿದೆ ಎಂದು ಪ್ರಾದೇಶಿಕ ಅಧಿಕಾರಿಯೊಬ್ಬರು ‘ಅಸೋಸಿಯೇಟೆಡ್ ಪ್ರೆಸ್’ಗೆ ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ನಾಲ್ವರು ಸೌದಿ ಪ್ರಜೆಗಳು ಹಾಗೂ ಇಬ್ಬರು ಬಾಂಗ್ಲಾದೇಶದ ಪ್ರಜೆಗಳು, ಒಬ್ಬ ಪ್ಯಾಲೆಸ್ಟೀನಿಯನ್, ಒಬ್ಬ ಅಮೆರಿಕನ್ ಪ್ರಜೆ, ಓರ್ವ ಈಜಿಪ್ಟ್ ಪ್ರಜೆ, ಓರ್ವ ಜೋರ್ಡಾನ್ ಪ್ರಜೆ, ಓರ್ವ ಸಿರಿಯನ್ ಮತ್ತು ಓರ್ವ ಸುಡಾನ್ ಪ್ರಜೆ ಸೇರಿದ್ದಾರೆ ಎಂದು ಸೌದಿ ಪ್ರಕಟಣೆಯಲ್ಲಿ ತಿಳಿಸಿದೆ. ಗಾಯಗೊಂಡವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ. ಈ ದಾಳಿಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ದೃಶ್ಯಾವಳಿಗಳಲ್ಲಿ ವಿಮಾನ ನಿಲ್ದಾಣದ ಹೊರಗೆ ಕನಿಷ್ಠ ಒಂದು ಆಂಬ್ಯುಲೆನ್ಸ್ ಮತ್ತು ಮತ್ತೊಂದು ವಾಹನ ಕಂಡುಬಂದಿದೆ


Share It

You cannot copy content of this page