ಉಪಯುಕ್ತ ಸುದ್ದಿ

ಹಾಲಿನ ದರ ಏರಿಕೆ ಮಾಡಿದ ಸರಕಾರ ; ಪ್ರತಿ ಲೀಟರ್ ಗೆ 8 ರೂಪಾಯಿ ಏರಿಕೆ

Share It

ಬೆಂಗಳೂರು: ಹಾಲಿನ ದರವನ್ನು ಪ್ರತಿ ಲೀಟರ್ ಗೆ ಎಂಟು ರೂಪಾಯಿ ಏರಿಕೆ ಮಾಡಲು ಸರಕಾರ ತೀರ್ಮಾನಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.

ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದು, ಏರಿಕೆ ಮಾಡಿದ ಎಂಟು ರೂಪಾಯಿಗಳಲ್ಲಿ ಏಳು ರೂಪಾಯಿಗಳನ್ನು ನೇರವಾಗಿ ರೈತರ ಅಕೌಂಟ್ ಗೆ ಹಾಕುವುದಾಗಿ ಸರಕಾರ ತಿಳಿಸಿದೆ. ಉಳಿದ ಒಂದು ರೂಪಾಯಿ ನಿಗಮಗಳ ನಿರ್ವಹಣೆಗಾಫಿ ಬಳಕೆ ಮಾಡಲು ತೀರ್ಮಾನಿಸಲಾಗಿದೆ.

ಬಸ್ ಟಿಕೆಟ್ ದರ ಏರಿಕೆ ಕುರಿತು ಕೂಡ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಟಿಕೆಟ್ ದರ ಏರಿಕೆ ನಿರ್ಧಾರವನ್ನು ಅಂತಿಂವಾಗಿ ಸಾರಿಗೆ ನಿಗಮಗಳಿಗೆ ವಹಿಸಲಾಗಿದೆ. ಶೀಘ್ರವೇ ಟಿಕೆಟ್ ದರವು ಎಚ್ಚಳವಾಗುವ ಸಾಧ್ಯತೆಯಿದೆ


Share It

You cannot copy content of this page