ಕನಕಪುರ: ಕನಕಪುರ ತಾಲೂಕಿನ ಹಾರೋಹಳ್ಳಿ ಸಮೀಪದಲ್ಲಿ ಜಂಗಲ್ ಟ್ರಯಲ್ಸ್ ರೆಸಾರ್ಟ್ ನಲ್ಲಿ ಮೋಜು ಮಸ್ತಿಯ ವೇಳೆ ಜೀಪ್ ಲೈನ್ ತಂಡಾಗಿ ಬಿದ್ದು, ಯುವತಿ ಮೃತಪಟ್ಟಿರುವ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ ಅತ್ತಿಬೆಲೆಯ ರಜನಿ(೨೧) ಸಾವಿಗೀಡಾದ ಯುವತಿ. ರಜನಿ ಮತ್ತು ಸ್ನೇಹಿತರು ರೆಸಾರ್ಟ್ಗೆ ಆಗಮಿಸಿದ್ದರು. ರೆಸಾರ್ಟ್ ನಲ್ಲಿರುವ ಅನೇಕ ಮೋಜು ಮಸ್ತಿಯ ಗೇಮ್‌ಗಳಲ್ಲಿ ಭಾಗವಹಿಸುತ್ತಿದ್ದರು. ಈ ವೇಳೆ ರೆಸಾರ್ಟ್ ನ ಜೀಪ್ ಲೈನ್‌ನಲ್ಲಿ ಆಟವಾಡುತ್ತಿರುವಾಗ ಜೀಪ್ ಲೈನ್ ತುಂಡಾಗಿ ಕಳೆಗೆ ಬಿದ್ದಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ರಜನಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತಾದರೂ, ಆಕೆಗೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಘಟನೆಗೆ ಸಂಬಂಧಿಸಿ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಜೀಪ್ ಲೈನ್ ಬಗ್ಗೆ ಆನೇಕ ಸಲ ದೂರು ನೀಡಿದ್ದರೂ, ಸರಿಪಡಿಸದೆ ನಿರ್ಲಕ್ಷö್ಯ ತೋರಿದ ಹಿನ್ನೆಲೆಯಲ್ಲಿ ರೆಸಾರ್ಟ್ ನ ಮ್ಯಾನೇಜರ್ ಪುಟ್ಟಮಾದು ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮೃತ ರಂಜನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕನಕಪುರ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಯುವತಿಯ ಸ್ನೇಹಿತರು ಮತ್ತು ಆಕೆಯ ಕುಟುಂಬಸ್ಥರು ರೆಸಾರ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.