ಉಪಯುಕ್ತ ಸುದ್ದಿ

ಪತ್ರಕರ್ತರು ಸಮಾಜದಲ್ಲಿ ವಿಶ್ವಾಸ ಗಳಿಸಿ: ಶ್ರೀನಿವಾಸ್

Share It

ಹೊಸಕೋಟೆ : ಪ್ರಸ್ತುತ ದಿನಗಳಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ ಹಾಗೂ ಪತ್ರಕರ್ತರು ಸಮಾಜದಲ್ಲಿ ವಿಶ್ವಾಸಾರ್ಹತೆ ಗಳಿಸಬೇಕು ಎಂದು ಬೆಂ. ಗ್ರಾ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಾ.ಜಿ.ಶ್ರೀನಿವಾಸ್ ತಿಳಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ 2024-25ನೇ ಸಾಲಿನ ಗುರುತಿನ ಚೀಟಿ ವಿತರಿಸಿ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗಕ್ಕೆ ವಿಶೇಷ ಸ್ಥಾನಮಾನವಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಪತ್ರಿಕಾ ರಂಗ ಕೂಡ ಉದ್ಯಮವಾಗಿ ಪರಿಣಮಿಸಿದ್ದು ರಾಜಕೀಯ ವ್ಯವಸ್ಥೆಗೆ ಪತ್ರಕರ್ತರು ತಳಕು ಹಾಕಿಕೊಂಡು ತಮ್ಮತನ ಮರೆಯುತ್ತಿರುವ ಪರಿಣಾಮ ಪತ್ರಕರ್ತರೆಂದರೆ ಮೂಗು ಮುರಿಯುವಂತಹ ಸನ್ನಿವೇಶ ಎದುರಾಗಿದೆ. ಆದ್ದರಿಂದ ಪತ್ರಕರ್ತರು ತಮ್ಮ ಅಂತಃಕರಣ ಒಪ್ಪುವಂತೆ ಕೆಲಸ ಮಾಡಬೇಕು. ಇದರಿಂದ ಪತ್ರಿಕಾ ಧರ್ಮದ ಘನತೆ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡಬಳ್ಳಾಪುರ ರಮೇಶ್ ಮಾತನಾಡಿ, ಪತ್ರ ಕರ್ತರು ಪಕ್ಷಾತೀತ, ಧರ್ಮಾತೀತ ಸಮಾಜದಅಭಿವೃದ್ಧಿ ದೃಷ್ಠಿಯಿಂದ ವಾಸ್ತವ ಅರಿತು ವರದಿ ಮಾಡಬೇಕು ಎಂದರು. ನೂತನ ಅಧ್ಯಕ್ಷ ಡಿ.ನಾಗರಾಜ್ ಮಾತ ನಾಡಿ, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸಂಘದ ಸರ್ವತೋಮುಖ

ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಸಂಘದ ಜಿಲ್ಲಾ ಕಾರ್ಯದರ್ಶಿ ಎಂ. ಆರ್.ನಾಗರಾಜ್, ಗೌರವ ಸಲಹೆಗಾರ ರಫೀಕ್, ನಿರ್ದೇಶಕರಾದ ಸುಗ್ಗರಾಜುರಾಘವೇಂದಾಚಾರಿ, ವೈ.ಆನಂದ್, ಎಸ್.ಸಿ.ಮಂಜುನಾಥ್, ಆರ್.ಸತೀಶ್, ಕೆ.ಎಂ.ದೇವರಾಜ್, ತಾಲೂಕು ಅಧ್ಯಕ್ಷ ಎಚ್‌.ಕೆ.ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ರಾಜ ಆರ್ಟ್ಸ್ ಮುನಿರಾಜ್. ಎ, ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಡಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಯಾಗಿ ಶಿವಪ್ರಕಾಶ್ ಸ್ವರೂಪ್, ಉಪಾಧ್ಯಕ್ಷ ರಾಗಿ ಎಂ.ಮುನಿರಾಜು, ಎಂ.ಆರ್.ಮಂಜು ನಾಥ್, ಖಜಾಂಚಿಯಾಗಿ ಚಾಂದ್ ಸಾಹೇಬ್, ಕಾರ್ಯದರ್ಶಿ ರಾಮಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ. ತ್ಯಾಗರಾಜ್, ರವಿಕುಮಾರ್, ಎಂ.ಆನಂದ್, ಎಸ್.ಕೆ.ವಸಂತ್ ಕುಮಾರ್, 3. ಎಂ.ನಾಗರಾಜ್, ನಾರಾಯಣಸ್ವಾಮಿ ಸಿ.ಎಸ್ ಎಸ್.ಸಿ.ವೆಂಕಟಸ್ವಾಮಿ ಅವಿರೋಧ ಆಯ್ಕೆಯಾದರು.


Share It

You cannot copy content of this page