ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕ್ಯಾಪ್ಟರ್ ಪತನ
ಬೆಂಗಳೂರು: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕ್ಯಾಪ್ಟರ್ ಪತನವಾಗಿದ್ದು, ಅವರ ಪ್ರಾಣಕ್ಕೆ ಕುತ್ತು ಒದಗಿದೆಯೇ ಎಂಬ ಅನುಮಾನ ದಟ್ಟವಾಗಿದೆ.
ಇಬ್ರಾಂಹಿA ರೈಸಿ ಅವರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕ್ಯಾಪ್ಟರ್ ವಾಯುವ್ಯ ಇರಾನ್ ಜೋಲ್ಫಾ ಎಂಬ ಪ್ರದೇಶದಲ್ಲಿ ಪತನವಾಗಿದೆ. ಹೆಲಿಕ್ಯಾಪ್ಟರ್ ಪತನವಾದ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಹೆಲಿಕ್ಯಾಪ್ಟರ್ನಲ್ಲಿದ್ದವರು ಬದುಕುಳಿದಿದ್ದಾರಾ? ಎಂಬ ಅನುಮಾನ ದಟ್ಟವಾಗಿದೆ.
ಇಬ್ರಾಹಿಂ ರೈಸಿ ಅವರು ಜಲಾಶಯವೊಂದರ ಉದ್ಘಾಟನೆಗೆ ಹಝರ್ಬೈಜಾನ್ನೆ ಪ್ರಯಾಣ ಬೆಳಸುತ್ತಿದ್ದರು. ಈ ವೇಳೆ ತೀವ್ರ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಹೆಲಿಕ್ಯಾಪ್ಟರ್ ನಿಯಂತ್ರಣ ತಪ್ಪಿ, ನೆಲಕ್ಕಪ್ಪಳಿಸಿದೆ. ದಟ್ಟ ಹೊಗೆ ಆವರಿಸಿಕೊಂಡಿದ್ದು, ಭಾರಿ ಗಾತ್ರದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಹೆಲಿಕ್ಯಾಪ್ಟರ್ನಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಜತೆಗೆ, ವಿದೇಶಾಂಗ ಸಚಿವರು ಕೂರ ಪ್ರಯಾಣ ಬೆಳಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇರಾನ್ ನಾಯಕರ ಪ್ರಾಣಕ್ಕೆ ಏನಾದರೂ ತೊಂದರೆಯಾಗಿರಬಹುದಾ? ಅಥವಾ ಪವಾಡದ ರೀತಿಯಲ್ಲಿ ಏನಾದರೂ ಹೆಲಿಕ್ಯಾಪ್ಟರ್ನಿಂದ ಪ್ಯಾರಚೂಟ್ ಬಳಸಿ ಬದುಕುಳಿದಿದ್ದಾರಾ ಎಂಬ
ಪ್ರಶ್ನೆಯೊAದು ಮೂಡಿದೆ.
ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಹಿನ್ನಡೆಯಾಗುತ್ತಿದ್ದು, ಭೂಮಾರ್ಗದ ಮೂಲಕ ತೆರಳಿ ಕಾರ್ಯಚರೆಣೆ ನಡೆಸಲು ಸೇನಾ ಪಡೆಗಳು ತಈರ್ಮಾನಿಸಿವೆ. ಈ ನಡುವೆ ಇರಾನ್ ನಾಯಕರಿಗೆ ಯಾಉದೇ ರೀತಿಯ ತೊಂದರೆಯಾUದಿರಲಿ, ಎಂದು ಇರಾನ್ ಜನತೆ ಪ್ರಾರ್ಥನೆ ಮಾಡುತ್ತಿದ್ದಾರೆ.