ನವದೆಹಲಿ: ಕಾವೇರಿ ನೀರು ಹರಿಸುವ ತೀರ್ಪಿಗೆ ಸರಿಯಾಗಿ ಸ್ಪಂದಿಸದಿದ್ದರೂ, ಕೊಳಚೆ ನೀರನ್ನು ಹರಿಸುವ ಮೂಲಕ ಸುಪ್ರೀಂ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗುತ್ತಿದೆ ಎಂದು ತಮಿಳುನಾಡು ಖ್ಯಾತೆ ತೆಗೆದಿದೆ.
ಇಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ವಾದ ಮಂಡಿಸಿದ ತಮಿಳುನಾಡು, ಕರ್ನಾಟಕಕ್ಕೆ ೨.೫ ಟಿಎಂಸಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ, ಮೇ ತಿಂಗಳ ಕೋಟಾ ಈವರೆಗೆ ಬಂದಿಲ್ಲ, ಆದರೆ, ಈಗ ಹರಿಯುತ್ತಿರುವ ಕಾವೇರಿ ನೀರಿನಲ್ಲಿ ಕೊಳಚೆ ನೀರನ್ನು ಹರಿಸಲಾಗುತ್ತಿದೆ ಎಂದು ಆರೋಪಿಸಿತು.
ಜಲಾಶಯದಿಂದ ನೀರನ್ನು ಹಸಿರುವುದನ್ನು ಕರ್ನಾಟಕ ನಿಲ್ಲಿಸಿದೆ. ಆದರೆ, ಮಂಡ್ಯ, ರಾಮನಗರ ಸೇರಿದಂತೆ ಬೆಂಗಳೂರಿನ ಮಹಾನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ನೀರನ್ನು ಕಾವೇರಿ ನದಿ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದು ಸುಪ್ರೀಂ ಕೋರ್ಟ್ನ ಆದೇಶದ ಉಲ್ಲಂಘನೆಯಾಗಿದೆ ಎಂದು ವಾದಿಸಿದೆ.
ಜೂನ್‌ವರೆಗೆ 9.19 ಟಿಎಂಸಿ ನೀರನ್ನು ಕರ್ನಾಟಕ ಸರಕಾರ ಹರಿಸಬೇಕಿದೆ. ಜುಲೈನಿಂದ ಡಿಸೆಂಬರ್‌ವರೆಗೆ ತಮಿಳುನಾಡಿನಲ್ಲಿ ಕೃಷಿಗೆ ನೀರು ಬೇಕು. ಆದರೆ, ಈವರೆಗೆ ಕರ್ನಾಟಕ ಯಾವುದೇ ಅಧಿಕೃತ ಆಶ್ವಾಸನೆ ಕೊಡುತ್ತಿಲ್ಲ. ಆದೇಶದ ಪ್ರಕಾರ ಪ್ರತಿ ತಿಂಗಳು ನೀರು ಬಿಡಬೇಕು. ಇಲ್ಲವಾದಲ್ಲಿ, ಕೃಷಿಗೆ ಹಿನ್ನಡೆಯಾಗುತ್ತದೆ ಎಂದು ತಮಿಳುನಾಡು ವಾದ ಮಂಡಿಸಿತು.
ತಮಿಳುನಾಡಿನ ಖ್ಯಾತೆಗೆ ಉತ್ತರಿಸಿದ ಕರ್ನಾಟಕ ಮನ್ಸೂನ್ ಮಳೆ ಉತ್ತಮವಾಗಿ ಆದರೆ, ಮಾತ್ರ ಆದೇಶದ ಪ್ರಕಾರ ನೀರು ಹರಿಸಲು ಸಾಧ್ಯ. ಇಲ್ಲವಾದಲ್ಲಿ, ಇಲ್ಲಿ ಕುಡಿಯುವ ನೀರಿಗೂ ತಾತ್ವಾರವಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಕುಡಿಯುವ ನೀರಿಗೂ ಕಷ್ಟಕರವಾದ ಪರಿಸ್ಥಿತಿಯಿದೆ. ಆದ್ದರಿಂದ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಕರ್ನಾಟಕ ವಾದ ಮಂಡನೆ ಮಾಡಿತು.