ಕೃಷಿ ಹೊಂಡಕ್ಕೆ ಬಿದ್ದು ಇಬ್ಬರ ಸಾವು
ಶಿವಮೊಗ್ಗ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಕಾಲಿಕ ಮರಣದ ವರದಿ ಹೆಚ್ಚುತ್ತಲೇ ಇದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರು ಯುವಕರು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಹಳ್ಳಿ ಗ್ರಾಮದ ಅಭಯ್(16) ಮತ್ತು ಮಾಲತೇಶ್(27) ಮೃತರು. ತಮ್ಮದೇ ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ ಆಯತಪ್ಪಿ ಕೃಷಿ ಹೊಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಕೃಷಿ ಚಟುವಟಿಕೆಯಲ್ಲಿ ಈ ಇಬ್ಬರು ಯುವಕರು ಮಗ್ನರಾಗಿದ್ದು, ನೀರು ಮೇಲೆತ್ತುವ ಉದ್ದೇಶದಿಂದ ಕೃಷಿ ಹೊಂಡಕ್ಕೆ ಅಭಯ್ ಇಳಿದಿದ್ದಾನೆ. ಆದರೆ, ಆಯತಪ್ಪಿ ಬಿದ್ದ ಕಾರಣಕ್ಕೆ ಆತ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಕಂಡು ಆತನ ರಕ್ಷಣೆಗೆ ಮಾಲತೇಶ್ ಮುಂದಾಗಿದ್ದಾನೆ.
ಅಭಯ್ ರಕ್ಷಣೆಗೆ ಹರಸಾಹಸ ಪಟ್ಟ ಮಾಲತೇಶ್ ಕೊನೆಗೆ ಆತನನ್ನು ರಕ್ಷಣೆ ಮಾಡಲಾಗದೆ, ಆಳಕ್ಕೆ ಇಳಿದು ತಾನು ಮೇಲೆ ಬರಲು ಸಾಧ್ಯವಾಗದೆ ಹೊಂಡಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಸಂಬAಧ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.