ಬೆಂಗಳೂರು: ಉತ್ತರ ಕರ್ನಾಟಕದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಉದ್ದೇಶಗಳನ್ನು ಇಟ್ಟುಕೊಂಡು. ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ನಾಗರಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚೆಗೆ ನಡೆದ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು 11 ಜನ ನಿರ್ದೇಶಕ ಮಂಡಳಿ ಒಳಗೊಂಡಂತೆ, ಮೂರು ಜನ ಆಮಂತ್ರಿತ ನಿರ್ದೇಶಕರನ್ನ ಒಳಗೊಂಡಿದೆ. ವಿವಿಧ ಸಂಘ- ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ, ವೃತ್ತಿಪರ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪದಾಧಿಕಾರಿಗಳ ಪಟ್ಟಿ ಈ ರೀತಿ ಇದೆ.
ಸಂಘದ ಅಧ್ಯಕ್ಷರಾಗಿ ಡಾ. ಬಿ.ಜಿ ಅವಟಿ, ಉಪಾಧ್ಯಕ್ಷರಾಗಿ V. S ಪಾಟೀಲರು ( ಪೊಲೀಸ್ ಪಾಟೀಲ್ ), ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಹೆಳವರ, ಕೋಶಾಧ್ಯಕ್ಷರಾಗಿ ಅಯ್ಯನಗೌಡ ಬಿರಾದಾರ್, ಸಹ ಕಾರ್ಯದರ್ಶಿಗಳಾಗಿ ತೋಟಪ್ಪ ಶೇಖಾ, ಗೌರವಾನ್ವಿತ ನಿರ್ದೇಶಕರಾಗಿ ಶಿವಕುಮಾರ್ ಶರಶೆಟ್ಟಿ, ಎಚ್.ಎಸ್ ಮುರಡಿ, ಬಸವರಾಜ್ ಬಿಳೆಬಾವಿ, ಎಸ್. ಮೋಹನ್ ಕುಮಾರ್, ವಿಜಯ ಶಾಂತಗಿರಿ, ಚಂದ್ರು ಜಂಗಣ್ಣನವರ್ ಆಯ್ಕೆಯಾಗಿದ್ದಾರೆ.
ಆಮಂತ್ರಿತ ನಿರ್ದೇಶಕರಾಗಿ ರಾಜ್ಯಧಾನಿಯ ಪ್ರಮುಖ ಬಿಲ್ಡರ್ ಆದ ದಯಾನಂದ್ ಪಟ್ಟಣಶೆಟ್ಟಿ (D. S MAX), ಇನ್ನೋರ್ವ ಪ್ರಖ್ಯಾತ ಬಿಲ್ದರಾದ ಶಿವನಗೌಡ ಪಾಟೀಲ್, ಸಾಮಾಜಿಕ ಕಾರ್ಯಕರ್ತ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕುಮಾರಿ ಪ್ರಾಚಿಗೌಡ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.