ಬೆಂಗಳೂರು: ಪ್ರಶಾಂತ್ ಕಿಶೋರ್, ಒಂದು ಕಾಲದ ಚುನಾವಣಾ ಚಾಣಕ್ಯ. ಆದ್ರೆ ಅದ್ಯಾಕೋ ಈ ಸಲದ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಅವ್ರು ಸೋಷಿಯಲ್ ಮೀಡಿಯಾದ ಟ್ರೋಲ್ ವಸ್ತು ಆಗ್ತಿದ್ದಾರೆ.
ಪ್ರಶಾಂತ್ ಕಿಶೋರ್, ಚುನಾವಣೆಗಳ ನಿಖರವಾದ ಪ್ರೆಡಿಕ್ಟರ್ ಎಂದೇ ಖ್ಯಾತರಾಗಿದ್ರು. ನರೇಂದ್ರ ಮೋದಿಯವರ ಆಸ್ಥಾನ ಕಲಾವಿದರಂತೆ ಇದ್ದ ಅವ್ರು, ಬರಬರುತ್ತಾ, ಮೋದಿ ವಿರುದ್ಧ ಮಾತನಾಡೋಲೆ ಶುರು ಮಾಡ್ಕೊಂಡಿದ್ರು. ಕಳೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಮತಾ ದೀದಿ ಜತೆ ಸೇರ್ಕೊಂಡು ಬಿಜೆಪಿಗೆ ಮಣ್ಣು ಮುಕ್ಕಿಸ್ತೇನೆ ಅಂತ ಪಣ ತೊಟ್ಟಿದ್ರು.
ಅಂತೆಯೇ ಬಿಜೆಪಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋತು ಸುಣ್ಣವಾಯ್ತು. ಇದರಿಂದ ಪ್ರಶಾಂತ್ ಕಿಶೋರ್ ಕಿಮ್ಮತ್ತು ಮತ್ತಷ್ಟು ಹೆಚ್ಚಾಯ್ತು. ಇದೇ ಮ್ಯಾಟ್ರು ಇಟ್ಕೊಂಡು ಕಾಂಗ್ರೆಸ್ ಪಾಳೆಯದಲ್ಲಿ ಗುರುತಿಸ್ಕೊಳ್ಳೋ ಪ್ರಯತ್ನ ಮಡೆಸಿದ್ರು. ಅದ್ಯಾಕೋ ರಾಹುಲ್ ಗಾಂಧಿಗೂ ಅವ್ರಿಗೆ ಆಗಿ ಬರ್ಲಿಲ್ಲ. ಹೀಗಾಗಿ, ಕಾಂಗ್ರೆಸ್ ನಿಂದ ದೂರವೇ ಉಳೀಬೇಕಾಯ್ತು. ಆದರೆ, ಬಿಜೆಪಿಯೂ ಹತ್ತಿರಕ್ಕೆ ಸೇರಿಸಿರ್ಲಿಲ್ಲ.
2024 ರ ಲೋಕಸಭಾ ಚುನಾವಣೆ ಹತ್ತಿರ ಬರ್ತಿದ್ದಂಗೆ ಮತ್ತೇ ಬಿಜೆಪಿ ಪಾಳೆಯ ಸೇರೋ ಪ್ರಯತ್ನ ನಡೆಸಿದ್ರು ಸಫಲವಾಗಲಿಲ್ಲ. ಆದ್ರೂ ತಮ್ಮ ಪ್ರೆಡಿಕ್ಷನ್ ಮೂಲಕ ಬಿಜೆಪಿಗೆ ಬಹುದೊಡ್ಡ ಗೆಲುವು ಬರುತ್ತೇ ಅಂತ ನಂಬಿಸಿ, ಅಲ್ಲಿ ಹತ್ತಿರವಾಗೋ ಪ್ರಯತ್ನ ಮಾಡ್ತಿದ್ದಾರೆ. ಅದೇ ಇದೋಗ ಇಡೀ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿರೋ ವಸ್ತು ಆಗ್ತಿದೆ.
ಪ್ರಶಾಂತ್ ಕಿಶೋರ್, ಲೋಕಸಭಾ ಚುನಾವಣೆ ಯಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಆದ್ರೆ, 400 ಸೀಟ್ ಬರುತ್ತೆ ಅನ್ನೋದೆಲ್ಲ ಸುಳ್ಖು, 275 ಬಂದ್ರು ಬಿಜೆಪಿಗೆ ಅಧಿಕಾರ ಸಿಗೋದು, ಎದುರಾಳಿಗಳ ವೀಕ್ ಮಾಡೋ ಸ್ಟ್ರಾಟಜಿ ಈ ” ಚಾರ್ ಸೌ ಪಾರ್” ಅಂದಿದ್ರು. ಈ ನಡುವೆ ಕರಣ್ ಥಾಪರ್ ಅವರ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್, ಪ್ರಶ್ನೆ ಕೇಳ್ತಿದ್ದಂತೆ ನೀರು ಕುಡಿದಿರೋ ವಿಡಿಯೋ ಇದೀಗ ಟ್ರೋಲ್ ಆಗ್ತಿದೆ.
ಅದೇ ಕರಣ್ ಥಾಪರ್, ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರಿಗೆ 2013 ರಲ್ಲಿ ನೀರು ಕುಡಿಸಿದ್ರು, ಈಗ ನೀರು ಕುಡಿಯೋ ಸರದಿ, ಮೋಧೀ ಆವರ ಹಿಂಬಾಲಕ ಪ್ರಶಾಂತ್ ಕಿಶೋರ್ ದು ಎಂದು ನೆಟ್ಟಿಗರು ಕೀ ಬೋರ್ಡ್ ಕುಟ್ಟಿದ್ದಾರೆ. ಮೋದಿ ಅವ್ರ ಹಳೆಯ ಫೋಟೋ ಮತ್ತು ಪ್ರಶಾಂತ್ ಕಿಶೋರ್ ಫೋಟೋ ಕೊಲಾಜ್ ಮಾಡಿ, ಕಾಳೆದಿದ್ದಾರೆ.
ಜೂನ್.4 ಕ್ಕೆ ಮತ್ತಷ್ಟು ನೀರ್ ಕುಡೀಬೇಕಾಗುತ್ತೆ !
ತಮ್ಮ ಮೇಲೆ ಬರ್ತಿರೋ ಟ್ರೋಲ್ ಗಳಿಗೆ ಪ್ರತಿಕ್ರಿಯೆ ನೀಡಿರೋ ಪ್ರಶಾಂತ್ ಕಿಶೋರ್,ನೀರು ಕುಡಿಯೋದು ಮೆದುಳು ಮತ್ತು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೂನ್ 4 ಕ್ಕೆ ಮತ್ತಷ್ಟು ನೀರ್ ಕುಡೀಬೇಕಾಗುತ್ತೆ. ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತೆ ಎಂದು ಉತ್ತರ ಕೊಟ್ಟಿದ್ದಾರೆ. ಆ ಮೂಖ ತಮ್ಮ ಪ್ರೆಡಿಕ್ಷನ್ ಪಕ್ಕಾ ಆಗುತ್ತೆ ಅನ್ಮೋದು ಅವರ ನಂಬಿಕೆ.
ಬಿಜೆಪಿ ಸ್ಫೋಕ್ ಪರ್ಸನ್ !:
ಈ ನಡುವೆ ಪ್ರಶಾಂತ್ ಕಿಶೋರ್, ಬಿಜೆಪಿಯ ನ್ಯಾಷನಲ್ ಸ್ಪೊಕ್ ಪರ್ಸನ್ ಆಗಿ ನೇಮಕ ಆಗಿದ್ದಾರೆ ಅನ್ಮೋ ಲೆಟರ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೆ.ಪಿ.ನಡ್ಡಾ ಅವ್ರ ಹೆಸರಲ್ಲಿ ಪ್ರಶಾಂತ್ ಕಿಶೋರ್ ಅವ್ರನ್ನ ನ್ಯಾಷನಲ್ ಸ್ಫೋಕ್ ಪರ್ಸನ್ ಆಗಿ ನೇಮ್ಕ ಮಾಡಲಾಗಿದೆ ಅಂತ ಲೆಟರ್ ಮಾಡಲಾಗಿದೆ. ಆದ್ರೆ, ಇದು ಫೇಕ್ ಲೆಟರ್ ಅನ್ನೋದು ಫ್ಯಾಕ್ಟ್ ಚೆಕ್ ಮೂಲಕ ಬಹಿರಂಗ ಆಗಿದೆ.