ಬೆಂಗಳೂರು: ಬೆಂಗಳೂರಿನ ಲ್ಲಿ ನಡೆದಿದ್ದ ರೇವ್ ಪಾರ್ಟಿಗೆ ನಾನು ಬಂದೇ ಇಲ್ಲ ಎಂದು ಡ್ರಾಮಾ ಮಾಡಿದ್ದ ತೆಲುಗು ಸಿರೀಯಲ್ ನಟಿ ಹೇಮಾ ಬಣ್ಣ ಕಳಚಿ ಬಿದ್ದಿದೆ.
ಆಕೆಯೂ ಸೇರಿದಂತೆ ಮೂವರು ಹೈದರಾಬಾದ್ ನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ ಬಂದಿರುವ ಟಿಕೆಟ್ ಇದೀಗ ವೈರಲ್ ಆಗಿದೆ. ಪಾರ್ಟಿ ದಿನವೇ ಮಧ್ಯಾಹ್ನ 3.15 ಕ್ಕೆ 6E-6305 ವಿಮಾನದಲ್ಲಿ ಬೆಂಗಳೂರು ತಲುಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೇಮಾ ಕೂಡ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿತ್ತು. ಆ ವರದಿಯನ್ನು ನಿರಾಕರಿಸಿದ್ದ ಹೇಮಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ತಾನು ಮನೆಯಲ್ಲಿಯೃ ಇರುವುದಾಗಿ ಹೇಳಿಕೊಂಡಿದ್ದರು. ಬಿರಿಯಾನಿ ಮಾಡುತ್ತಿರುವ ವಿಡಿಯೋ ಹಾಕಿ ಮಾಧ್ಯಮಗಳ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದರು.
ಇದೀಗ ಪೊಲೀಸರು ಸಂಗ್ರಹ ಮಾಡಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದವರ ಬ್ಲಡ್ ಸ್ಯಾಂಪಲ್ ನಲ್ಲಿ ಹೇಮಾ ಹೆಸರಿದೆ. ಅದು ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಆಕೆ ಮತ್ತಿಬ್ಬರ ಜೊತೆಯಲ್ಲಿ ಪಾರ್ಟಿ ನಡೆದ ದಿನವೇ ಬೆಂಗಳೂರು ವಿಮಾನ ನಿಲ್ದಾಣ ಕ್ಕೆ ಆಗಮಿಸಿರುವ ಮಾಹಿತಿ ಲಭ್ಯವಾಗಿದೆ.
ಮತ್ತು ಭರಿಸುವ ಪಾರ್ಟಿ ನಡೆಸಿ, ನನಗೇನು ಗೊತ್ತೇ ಇಲ್ಲ ಎಂದು ನಾಟಕವಾಡಿದ ಹೇಮಾ ಇದೀಗ ಡ್ರಗ್ಸ್ ಸೇವನೆ ಮಾಡಿರುವುದು ಮತ್ತು ಬೆಂಗಳೂರಿನ ಪಾರ್ಟಿಯಲ್ಲಿ ಭಾಗವಹಿಸಿರುವುದು ದೃಢಪಟ್ಟಿದೆ. ಹೀಗಾಗಿ, ಆಕೆ ಕಾನೂನು ಕ್ರಮ ಎದುರಿಸಬೇಕಾದ ಅನಿರ್ವಾಯತೆ ಇದೆ.