ಬೆಂಗಳೂರು ರೇವ್ ಪಾರ್ಟಿ: ಡ್ರಗ್ಸ್ ಪೆಡ್ಲರ್ ಬಂಧನ
ನಟಿ ಹೇಮಾ ಪರ ಆಂಧ್ರದ ರಾಜಕಾರಣಿಗಳ ಬ್ಯಾಟಿಂಗ್
ಸಿಸಿಬಿಗೆ ಆಂಧ್ರ ರಾಜಕಾರಣಿಗಳಿಂದ ನಿರಂತರ ಕರೆ
ಬೆಂಗಳೂರು: ಬೆಂಗಳೂರು ರೇವ್ ಪಾರ್ಟಿಗೆ ಆಂಧ್ರದ ನಂಟು ಜೋರಾಗಿದ್ದು, ಪಾರ್ಟಿಗೆ ಡ್ರಗ್ಸ್ ಸಪ್ಲೇ ಮಾಡಿದ್ದ ಡ್ರಗ್ಸ್ ಪೆಡ್ಲರ್ ಒಬ್ಬನನ್ನು ಚನ್ನಮ್ಮನ ಅಚ್ಚುಕಟ್ಟು ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯನ್ ಪ್ರಜೆಗಳು, ವಿದ್ಯಾರ್ಥಿಗಳು ಮತ್ತು ರೇವ್ ಪಾರ್ಟಿಗಳಿಗೆ ನಿರಂತರವಾಗಿ ಡ್ರಗ್ಸ್ ಸಪ್ಲೇ ಮಾಡುತ್ತಿದ್ದ ಪೆಡ್ಲರ್ ನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ೧೨೦ ಗ್ರಾಂ ಸಿಂಥೆಟಿಕ್ ಡ್ರಗ್ಸ್, ಎಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಆತ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೇ ಮಾಡುತ್ತಿದ್ದ ಎನ್ನಲಾಗಿದೆ. ಸಿಸಿಬಿ ನೀಡಿದ ಮಾಹಿತಿ ಮೇರೆಗೆ ಆತನನ್ನು ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆ ಮುಂದುವರಿಸಲಾಗಿದೆ.
ಈ ನಡುವೆ ರೇವ್ ಪಾರ್ಟಿಗೆ ಸಂಬAಧಿಸಿದAತೆ ಡ್ರಾಮಾ ಆಡಿದ್ದ ನಟಿ ಹೇಮಾಗೆ ಸಿಸಿಬಿ ಪೊಲೀಸರು ನೊಟೀಸ್ ನೀಡುತ್ತಿದ್ದಂತೆ, ಆಕೆಯನ್ನು ಪ್ರಕರಣದಿಂದ ಕಾಪಾಡುವ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ ಎನ್ನಲಾಗಿದೆ.
ಸಿಸಿಬಿಗೆ ಆಂಧ್ರದ ಹಲವಾರು ರಾಜಕಾರಣಿಗಳು ಕರೆ ಮಾಡುತ್ತಿದ್ದು, ಹೇಮಾ ಅವರನ್ನು ಪ್ರಕರಣದಿಂದ ಕೈಬಿಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ಸಿಸಿಬಿ ಪೊಲೀಸರು ಯಾವುದೇ ಕಾರಣಕ್ಕೂ ಪ್ರಕರಣದಿಂದ ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಇಂತಹ ಡ್ರಗ್ಸ್ ಪಾರ್ಟಿ ನಡೆಸುವುದು ಬೆಂಗಳೂರಿನ ಮತ್ತು ರಾಜ್ಯದ ಘಟನೆಗೆ ಆಗುವ ಅವಮಾನ. ಅದಕ್ಕೆ ರಾಜ್ಯದ ಪೊಲೀಸರು ಅವಕಾಶ ಮಾಡಿಕೊಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.