ಅಪರಾಧ ರಾಜಕೀಯ ಸುದ್ದಿ

ಭವಾನಿ ರೇವಣ್ಣ ಬಂಧಿಸಲು ಎಸ್‌ಐಟಿ ಸಿದ್ಧತೆ

Share It

ಬೆಂಗಳೂರು: ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಎಸ್‌ಐಟಿ ಹೊಳೇನರಸೀಪುರದ ಅವರ ನಿವಾಸಕ್ಕೆ ಆಗಮಿಸಿದೆ.

ಕೆ.ಆರ್ ನಗರದ ಸಂತ್ರಸ್ಥೆಯ ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೊಟೀಸ್ ನೀಡಿತ್ತು. ಆ ನೊಟೀಸ್‌ಗೆ ಉತ್ತರ ನೀಡಿದ್ದ ಭವಾನಿ, ತಮಗೆ ಅನಾರೋಗ್ಯ ಇರುವ ಕಾರಣದಿಂದ ಮನೆಯಲ್ಲಿಯೇ ವಿಚಾರಣೆ ಎದುರಿಸುವುದಾಗಿ ಹೇಳಿದ್ದರು.

ಇದರ ನಡುವೆ ಭವಾನಿ ರೇವಣ್ಣ, ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಅರ್ಜಿ ವಜಾಗೊಳಿಸುತ್ತಿದ್ದಂತೆ, ಭವಾನಿ ರೇವಣ್ಣ ಎಸ್‌ಐಟಿ ಮುಂದೆ ಹಾಜರಾಗದೆ, ತಲೆ ಮರೆಸಿಕೊಂಡಿದ್ದಾರೆ. ಅವರ ಮನೆಗೆ ಆಗಮಿಸಿರುವ ಎಸ್‌ಐಟಿ ಅವರಿಗಾಗಿ ಕಾಯುತ್ತಿದೆ.

ಹೊಳೇನರಸೀಪುರದ ಮನೆಯಲ್ಲಿ ಕೆಲಗಾರರು ಮತ್ತು ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಬೇರಾರು ಇಲ್ಲ ಎನ್ನಲಾಗಿದೆ. ಹೀಗಾಗಿ, ಎಸ್‌ಐಟಿ ಪೊಲೀಸರು, ಮನೆಯ ಕಾಂಪೌAಡ್ ಒಳಗೆ ಜೀಪ್ ನಿಲ್ಲಿಸಿಕೊಂಡು ಕಾಯುತ್ತಿದ್ದಾರೆ. ಒಂದು ವೇಳೆ ಅವರು ವಿಚಾರಣೆಗೆ ಹಾಜರಾಗದೆ ಹೋದರೆ, ಅದೇ ನೆಪವೊಡ್ಡಿ ಅವರನ್ನು ಅರೆಸ್ಟ್ ಮಾಡಲು ಎಸ್‌ಐಟಿ ಚಿಂತನೆ ನಡೆಸಿದೆ.


Share It

You cannot copy content of this page