ರಾಜಕೀಯ ಸುದ್ದಿ

7ನೇ-ಕೊನೇ ಹಂತದ ಲೋಕಸಭಾ ಚುನಾವಣೆ: ಮಧ್ಯಾಹ್ನ 3 ಗಂಟೆಗೆ ಶೇ.49.68 ರಷ್ಟು ಮತದಾನ

Share It

ದೇಶದ 7 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟಾರೆ 57 ಲೋಕಸಭಾ ಕ್ಷೇತ್ರಗಳ 7ನೇ ಹಾಗೂ ಅಂತಿಮ ಹಂತದ ಲೋಕಸಭಾ ಚುನಾವಣೆಗೆ ಮತದಾನ ಭರದಿಂದ ಸಾಗಿದೆ.

ಇಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯೋಗದ ಮಾಹಿತಿ ಪ್ರಕಾರ 57 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ ಶೇಕಡಾ 49.68 ರಷ್ಟು ಮತದಾನ ಚಲಾವಣೆಯಾಗಿದೆ. ಇಂದು ಸಂಜೆ 6 ಗಂಟೆಗೆ ಸರಿಯಾಗಿ 7ನೇ ಹಾಗೂ ಕೊನೆಯ ಹಂತದ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯವಾಗಲಿದೆ.


Share It

You cannot copy content of this page