ಬೆಂಗಳೂರು: ಪರಿಸರವನ್ನು ಉಳಿಸಿಕೊಳ್ಳದೆ ನಾವು ಬದುಕಲು ಸಾಧ್ಯವಿಲ್ಲ. ಅದನ್ನು ಉಳಿಸಲು ನಾವೆಲ್ಲರು ಕೈ ಜೋಡಿಸಬೇಕೆಂದು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ವಿದ್ಯಾರ್ಥಿಗಳಲ್ಲಿ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಂ.ಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನ ಆಡಿಟೋರಿಯಂನಲ್ಲಿ ಇಂದು ಹಮ್ಮಿಕೊಂಡಿದ್ದ ಹಸಿರು ಮತ್ತು ಆಕರ್ಷಕ(ವೈಬ್ರೆಂಟ್) ಬೆಂಗಳೂರಿಗಾಗಿ ಯುವಕರು ಎಂಬ “ಆಲ್ಟರ್ನೇಟಿವ್ 2024” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಪರಿಸರ ರಕ್ಷಣೆ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದ್ದು, ತಾವುಗಳು ಪರಿಸರ ರಕ್ಷಣೆಯಲ್ಲಿ ಜಾಗೃತರಾಗಿರಬೇಕು. ಮುಂದಿನ ಪೀಳಿಗೆಯು ಆರೋಗ್ಯಕರ ಜೀವನ ಸಾಗಿಸಬೇಕಾದರೆ ಉತ್ತಮ ಪರಿಸರ ನಿರ್ಮಿಸವುದು ಮುಖ್ಯ. ಅದಕ್ಕೆ ಯುವಕರ ಕೊಡುಗೆ ಹೆಚ್ಚು ಮುಖ್ಯವೆಂದು ಹೇಳಿದರು.
ಪರಿಸರ ರಕ್ಷಣೆಗೆ ನಾವು ಮಾಡಬೇಕಾಗಿರುವ ಕೆಲಸಗಳೆಂದರೆ ಮೊದಲು ಗಿಡ ಮರಗಳನ್ನು ನೆಟ್ಟು ಹಸಿರನ್ನು ಹೆಚ್ಚಿಸಬೇಕು. ನಾಗರೀಕರೆಲ್ಲರೂ ತಮ್ಮ ಮನೆಗಳಲ್ಲಿ ತಪ್ಪದೆ ಮಳೆ ನೀರು ಕೊಯ್ಲು ಅಳವಡಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು ಭಾಗಿಯಾಗಬೇಕು. ದಿನ ನಿತ್ಯ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಕವರ್ ಬಳಸದೇ ಪೇಪರ್/ ಬಟ್ಟೆ ಬ್ಯಾಗ್ ಬಳಸಬೇಕೆಂದು ತಿಳಿಸಿದರು.
ಭಾರತವು ಯುವಜನರ ದೇಶವಾಗಿದ್ದು, ಅದೇ ನಮ್ಮ ದೊಡ್ಡ ಬಲವಾಗಿದೆ. ನಿಮ್ಮ ಸುತ್ತಮುತ್ತ ಬದಲಾವಣೆಗಾಗಿ ನೀವೇನು ಮಾಡಬಹುದೋ ಅದನ್ನು ಮಾಡಲು ಆರಂಭಿಸಬೇಕು. ನೀವು ಬದಲಾವಣೆಯ ಹರಿಕಾರರು. ಇಲ್ಲದಿದ್ದಲ್ಲಿ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದರು.
ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ಶ್ರೀ ಎನ್. ಮಂಜುನಾಥ ಪ್ರಸಾದ್ ಮಾತನಾಡಿ, ನಗರದಲ್ಲಿ ದಿನೇ ದಿನೇ ಜನಸಂಖ್ಯೆಯ ಪ್ರಮಾಣ ಹೆಚ್ಚಳವಾಗುತ್ತಿದ್ದು, ಇದರಿಂದ ಪರಿಸರದ ಮೇಲೆ ಹೆಚ್ಚಿನ ಪ್ರಮಾಣ ಬೀರಲಿದೆ. ಜನಸಂಖ್ಯೆಗೆ ಅನುಗುಣವಾಗಿ ನಾವು ಪರಿರವನ್ನು ಹೆಚ್ಚಳ ಮಾಡಬೇಕೆಂದು ತಿಳಿಸಿದರು.
ನಗರವನ್ನು ಹಸಿರು ಮತ್ತು ಆಕರ್ಷಕ ಬೆಂಗಳೂರನ್ನಾಗಿ ಮಾರ್ಪಡಿಸು ಯುವಕರಿಂದ ಮಾತ್ರ ಸಾಧ್ಯ. ಮೊದಲು ನಿಮ್ಮಿಂದ ಪ್ರಾರಂಭವಾಗಬೇಕಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಯುವಕರೂ ಒಂದೊAದೊ ಜವಾಬ್ದಾರಿಯನ್ನು ತೆಗೆದುಕೊಂಡು ನಗರದ ಬದಲಾವಣೆಗೆ ಮುಂದಾಗಬೇಕೆAದು ಹೇಳಿದರು.
ನಗರದಲ್ಲಿ ಕಸದ ಸಮಸ್ಯೆಯನ್ನು ನಿವಾರಿಸಲು ಎಲ್ಲರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ನಮ್ಮಿಂದ ಉತ್ಪತ್ತಿ ಆಗುವ ತ್ಯಾಜ್ಯವನ್ನು ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ನಾವೇ ಪ್ರತ್ಯೇಕಿಸಿ ರಸ್ತೆ ಬದಿ ಬಿಸಾಡುವುದನ್ನು ನಿಲ್ಲಿಸಿ ಪಾಲಿಕೆಯ ಆಟೋ ಟಿಪ್ಪರ್ ಗಳಿಗೆ ನೀಡಬೇಕು. ಬೇಕು.
ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ನಗರದ ಜನಸಂಖ್ಯೆಯಲ್ಲಿ ಶೇ. 65 ರಷ್ಟು ಯುವಕರಿದ್ದು, ಎಲ್ಲಾ ಯುವಕರು ಜಲಮಂಡಳಿ ಜೊತೆ ಕೈ ಜೋಡಿಸಿದರೆ “ವಾಟರ್ ಸರ್ಫ್ಲಸ್” ಬೆಂಗಳೂರನ್ನಾಗಿ ಮಾಡಬಹುದೆಂದು ತಿಳಿಸಿದರು.
ಬೆಂಗಳೂರು ಸಮುದ್ರ ಮಟ್ಟಕ್ಕಿಂದ ಸುಮಾರು 1000 ಮೀ. ಎತ್ತರದಲ್ಲಿರುವ ಕಾರಣ 100 ಕಿ.ಮೀ ದೂರದಲ್ಲಿರುವ ಕಾವೇರಿ ನದಿಯಿಂದ ಎತ್ತರದ ಪ್ರದೇಶಕ್ಕೆ ನೀರು ತರುವುದು ತುಂಬಾ ಕಷ್ಟ. ನಗರದಲ್ಲಿ ವೃಷಭಾವತಿ ನದಿ, ಅರ್ಕಾವತಿ ನದಿ, ದಕ್ಷಿಣ ಪಿನಾಕಿನಿ ಹಾಗೂ ಸ್ವರ್ಣಮುಖಿ ನದಿಗಳಿದ್ದು, ಅವುಗಳಿಗೆ ಪುನರ್ಜೀವ ನೀಡಿದರೆ ನಗರದಲ್ಲಿ ನೀರಿನ ಸಮಸ್ಯೆ ನಿವಾರಿಸಬಹುದಾಗಿದೆ ಎಂದರು.
ನಗರದಲ್ಲಿ 4 ನದಿಗಳು ನಾಲೆಗಳಾಗಿ ಬದಲಾಗಿದ್ದು, ಯುವಕರೆಲ್ಲರೂ ಸೇರಿ ನಾಲೆಗಳಾಗಿರುವುದನ್ನು ನದಿಗಳನ್ನಾಗಿ ಪುನರ್ಜೀವ ಮಾಡಲು ಮುಂದಾಗಬೇಕು. ಬೆಂಗಳೂರಲ್ಲಿ ನೀರಿನ ಪ್ರಮಾಣ ಹೆಚ್ಚಿಸುವುದು ನಮ್ಮ ಕನಸಾಗಿದೆ. ಈ ಕನಸಿನಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಲಿದ್ದು, ಅದಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಬೆಂಗಳೂರು ಉತ್ತರ ಸಂಚಾರ ಡಿಸಿಪಿ ಸಿರಿ ಗೌಡ, ರಾಜ್ಯ ಎನ್ಎಸ್ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಬಾಲಚಂದ್ರ, ಗೋಕುಲ ಶೈಕ್ಷಣಿಕ ಫೌಂಡೇಷನ್ ಮುಖ್ಯ ಕಾರ್ಯ ನಿರ್ವಾಹಕ ಶ್ರೀನಿವಾಸ ಮೂರ್ತಿ, ವಿಮೋವೆ ಫೌಂಡೇಶನ್ ಸಂಸ್ಥಾಪಕ ಮತ್ತು ಆಲ್ಟರ್ನೇಟಿವ್ 24 ಕಾರ್ಯಕ್ರಮದ ಮುಖ್ಯ ರೂವಾರಿ ವಿನಯ ಶಿಂಧೆ, ದಿ ನ್ಯಾಚುರಲ್ ಸ್ಕೂಲ್ ನ ಸಂಸ್ಥಾಪಕರಾದ ಪ್ರಿಯಾ ವೆಂಕಟೇಶ್, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

