ರಾಜಕೀಯ ಸುದ್ದಿ

ಕೊನೇ ಹಂತದ ಲೋಕಸಭಾ ಚುನಾವಣೆ: ಸಂಜೆ 5 ರವರೆಗೆ ಶೇ.58.34 ರಷ್ಟು ಮತ ಚಲಾವಣೆ

Share It

ದೇಶದ 2024 ರ ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದಿದೆ.

ಒಟ್ಟಾರೆ 57 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿದೆ. ಸಂಜೆ 5 ಗಂಟೆಗೆ 57 ಕ್ಷೇತ್ರಗಳಲ್ಲಿ ಒಟ್ಟಾರೆ ಶೇಕಡಾ 58.34 ರಷ್ಟು ಮತದಾನ ಚಲಾವಣೆಯಾಗಿದೆ.

ಆದಾಗ್ಯೂ ಸಂಜೆ 6 ಗಂಟೆಯವರೆಗಿನ ಒಟ್ಟಾರೆ ಶೇಕಡಾವಾರು ಮತದಾನ ಎಷ್ಟು ಎಂಬ ಅಂಕಿ-ಅಂಶಗಳ ಮಾಹಿತಿ ರಾತ್ರಿ ಚುನಾವಣಾ ಆಯೋಗದಿಂದ ಬರಲಿದೆ. ಜೂನ್ 4 ರಂದು ಒಟ್ಟಾರೆ 543 ಲೋಕಸಭಾ ಕ್ಷೇತ್ರಗಳ ಫಲಿತಾಂಶಕ್ಕೆ ಮತ ಎಣಿಕೆ ನಡೆಯಲಿದೆ.


Share It

You cannot copy content of this page