ಉಪಯುಕ್ತ ಸುದ್ದಿ

ಮರು ಮೌಲ್ಯಮಾಪನದ ಬಳಿಕ ಶಿವಮೊಗ್ಗದ ಶಾರ್ವರಿ ರಾವ್‌ ರಾಜ್ಯಕ್ಕೆ ಟಾಪರ್‌

Share It

ಶಿವಮೊಗ್ಗ : ಆಲ್ಕೊಳ ವಿಕಾಸ ಪ್ರೌಢಶಾಲೆಯ SSLC ವಿದ್ಯಾರ್ಥಿನಿ ಶಾರ್ವರಿ ಪಿ. ರಾವ್‌ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 9 ಅಂಕ ಪಡೆದಿದ್ದಾರೆ. ಈಗ ಒಟ್ಟಾರೆ 622 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್‌ ಪಡೆದಿದ್ದಾಳೆ.

ವಿಜ್ಞಾನ ವಿಷಯದಲ್ಲಿ 91 ಅಂಕ ಬಂದಿತ್ತು. ಹೆಚ್ಚು ಅಂಕ ಬರುವ ವಿಶ್ವಾಸವಿದ್ದುದರಿಂದ ಮರುಮೌಲ್ಯಮಾಪನ ಮಾಡಿಸಿದ್ದು, ವಿಜ್ಞಾನದಲ್ಲಿ 100 ಅಂಕ ಲಭಿಸಿದೆ.

ಕಲ್ಲಹಳ್ಳಿ ಪ್ರಿಯದರ್ಶಿನಿ ಪ್ರೌಢಶಾಲೆಯ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿ ಎಂ.ವೈ.ವರುಣ್‌ಗೆ ಮರು ಮೌಲ್ಯಮಾಪನದ ಬಳಿಕ ಎರಡು ವಿಷಯದಲ್ಲಿ ಹೆಚ್ಚುವರಿಯಾಗಿ 8 ಅಂಕಗಳು ಲಭಿಸಿದೆ.

ಒಟ್ಟಾರೆಯಾಗಿ 603 ಅಂಕ ಪಡೆದಿದ್ದಾನೆ. ಮರು ಮೌಲ್ಯಮಾಪನದಲ್ಲಿ ಈತನಿಗೆ ವಿಜ್ಞಾನದಲ್ಲಿ ಮೂರು ಹಾಗೂ ಸಮಾಜ ವಿಜ್ಞಾನದಲ್ಲಿ 5 ಅಂಕಗಳು ದೊರೆತಿವೆ.


Share It

You cannot copy content of this page