ಮಾವಿನ ಹಣ್ಣು ಎಂದ ಕೂಡಲೇ ಬಾಯಲ್ಲಿ ನೀರು ಬರುವುದು ಸಹಜ. ಆದ್ರೆ ಮಾವಿನ ಹಣ್ಣನ್ನು ಅತಿಯಾಗಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ. ದೇಹದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಭಾಯಿಸುವ ಬಗ್ಗೆ ಇಲ್ಲಿ ಹೇಳಲಾಗಿದೆ. ವೈದ್ಯರ ಪ್ರಕಾರ ಎಷ್ಟು ಮಾವಿನ ಹಣ್ಣನ್ನು ತಿಂದರೆ ಸೂಕ್ತ ಎಂಬುದನ್ನು ಈ ಕೆಳಗಿನಂತೆ ತಿಳಿಯೋಣ..
ಮಾವಿನ ಸೀಸನ್ ಬಂದರೆ ಸಾಕು ಬೀದಿ ಬದಿಯಿಂದ ಹಿಡಿದು ದೊಡ್ಡ ದೊಡ್ದ ಮಾಲ್ ವರೆಗೆ ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಕೆಲವರಂತೂ ದಿನವಿಡಿ ಮಾವಿನ ಹಣ್ಣನ್ನು ತಿಂದುಕೊಂಡೆ ಕಾಲ ಕಳೆಯುವ ಮಂದಿಯೂ ಇದ್ದಾರೆ. ಮಾವಿನ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಮಧುಮೇಹ ಬರುವ ಸಾಧ್ಯತೆ ಇದೆ.

ವೈದ್ಯರ ಸಲಹೆಯಂತೆ ಮಾವಿನ ಹಣ್ಣುಗಳನ್ನು ದಿನಕ್ಕೆ ಎಷ್ಟು ತಿನ್ನಬೇಕು ಎಂಬುದನ್ನು ಈ ಕೆಳಗಿನಂತೆ ನೋಡುತ್ತ ಹೋಗೋಣ.
ಮಾವು ಸೇವನೆಯ ಉಪಯೋಗಗಳು
ಮಾವು ಹೆಚ್ಚು ಪೋಷಕಾಂಶ ಭರಿತ ಹಣ್ಣಾಗಿದ್ದು, ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಅಲ್ಲದೇ ವಿಟಮಿನ್ ಗಳು, ಕೆಲ ಖನಿಜಗಳು, ರೋಗ ನಿರೋಧಕ ಅಂಶಗಳು, ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶಗಳನ್ನು ಒಳಗೊಂಡಿದೆ. ನಮ್ಮ ಚರ್ಮದ ಆರೈಕೆಯಲ್ಲೂ ಮಾವು ಸಹಕಾರಿಯಾಗಲಿದೆ.

ಮಾವಿನ ಹಣ್ಣಿನಲ್ಲಿ ಅಮೈನೋ ಆಮ್ಲಗಳು ಹೆಚ್ಚಾಗಿವೆ. ಮಲಬದ್ಧತೆ ಹಾಗೂ ಜೀರ್ಣಕ್ರಿಯೆಗೆ ಮಾವು ಸಹಕಾರಿ. ಮಾವಿನ ಹಣ್ಣನ್ನು ತಿನ್ನುವಾಗ ಹೆಚ್ಚು ಡೋಪಮಿನ್ ಬಿಡುಗಡೆಯಾಗಿ ನಮಗೆ ಹೆಚ್ಚಿನ ಸಂತೋಷದ ಅನುಭವವನ್ನು ನೀಡುತ್ತದೆ.
ಪೌಷ್ಟಿಕ ತಜ್ಞ ಜೂಹಿ ಕಪೂರ್ ರವರು ಹೇಳುವಂತೆ ಸುಮಾರು 150 ಗ್ರಾಂ ಕ್ಯಾಲೋರಿ ಹಣ್ಣು ತಿನ್ನಲು ಯೋಗ್ಯ ಎಂದು ತಮ್ಮ Instagram ಖಾತೆಯಲ್ಲಿ ಪೋಸ್ಟ್ ಹಾಕಿದ್ದರು. ಸಾಮಾನ್ಯವಾಗಿ ಒಂದು ಮಾವು 120 ರಿಂದ 150 ಗ್ರಾಂ ಗಳನ್ನು ಹೊಂದಿರುತ್ತದೆ. ಕ್ಯಾಲೋರಿಯ ಲೆಕ್ಕದಲ್ಲಿ ಹಣ್ಣನ್ನು ತಿನ್ನಬೇಕು.

ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ 2000 ಕ್ಯಾಲೋರಿ ಅಗತ್ಯ ವಿರುತ್ತದೆ. ಒಂದು ದೊಡ್ದ ಗಾತ್ರದ ಮಾವಿನ ಹಣ್ಣನ್ನು ತಿನ್ನುವುದರಿಂದ ಅವರ ನಿತ್ಯದ ಶೇ. 15 ರಷ್ಟು ಕ್ಯಾಲೋರಿ ನೀಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ನಿಮಗೆ ಅಗತ್ಯ ವಿದ್ದರೇ ಮಾವಿನ ಹಣ್ಣನ್ನು ತಿನ್ನುವ ಮುನ್ನ ನಿಂಬೆ ಜೋಸ್ ಕುಡಿಯಿರಿ. ನೆನಚಿಗೆ ಬಾದಾಮಿ ಬಳಕೆ ಮಾಡಬಹುದು.
ನಾವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮುನ್ನ ಮಾವಿನ ಹಣ್ಣನ್ನು ಸೇವಿಸುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಹಾಲು ಅಥವಾ ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ಕುಡಿಯುವುದು ಸೂಕ್ತವಲ್ಲ. ಹೀಗೆ ಮಾಡುವುದರಿಂದ ಮಾವಿನ ಹಣ್ಣಿನಲ್ಲಿ ಇರುವ ಪೋಷಕಾಂಶಗಳು ಕಡಿಮೆಯಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ.

