ಬಾಲರಾಮಪುರ: ಕೊನೆಗೂ ಎನ್ ಡಿಎ ಸರ್ಕಾರದ ರಚನೆಗೆ ಕ್ಷಣಗಣನೆ ಆರಂಭವಾಗಿದೆ. 3 ನೆಯ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿ ಗದ್ದುಗೆ ಏರಲಿದ್ದಾರೆ. ಇದೇ ವೇಳೆ ಬಿಜೆಪಿ ಅಭಿಮಾನಿಯೊಬ್ಬ ತನ್ನ ಕೈ ಬೆರಳನ್ನು ಕಾಳಿ ದೇವಿಗೆ ಅರ್ಪಿಸಿದ್ದಾನೆ.
ಬಾಲರಾಮಪುರ ಜಿಲ್ಲೆಯ ದೀಪಹರ್ ಗ್ರಾಮದ ದುರ್ಗೇಶ್ ಪಾಂಡೆ ಎಂಬ ಯುವಕ ತನ್ನ ಕೈ ಬೆರಳನ್ನು ಕತ್ತರಿಸಿಕೊಂಡು ದುರ್ಗಾ ದೇವಿಗೆ ಅರ್ಪಿಸಿದ್ದಾನೆ. ಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿ ಹಿಂದೆ ಬಿದ್ದಿದ್ದ ವೇಳೆ ಸ್ವತಃ ತನ್ನ ದೇವರಾದ ದುರ್ಗೆಗೆ ಹರಕೆ ಹೊತ್ತುಕೊಂಡಿದ್ದೆ. ಹಾಗೇ ಹರಕೆ ಈಗ ತೀರಿಸಿದ್ದೇನೆ.
ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ದೇಶದ ಪ್ರಧಾನಿಯಾಗಬೇಕು ಎಂದು ಕೇಳಿಕೊಂಡಿದ್ದೆ. ನನ್ನ ಹರಕೆ ನೆರವೇರಿದೆ. ಅದ್ದರಿಂದ ರಕ್ತದ ಸಮೇತ ಕಾಳಿಗೆ ಬೆರಳನ್ನು ಅರ್ಪಿಸಿದ್ದೇನೆ ಎಂದು ಹೇಳಿದ್ದಾನೆ. ಮೈತ್ರಿ ಎಂದಾಗ ನನಗೆ ಸ್ವಲ್ಪ ಭಯವಾಗಿತ್ತು. ಆಗ ನೇರವಾಗಿ ದೇವಿ ಬಳಿ ಹೋಗಿ ಪ್ರಾರ್ಥನೆ ಸಲ್ಲಿಸಿದೆ. ಬಿಜೆಪಿ 400 ಸಿಟ್ ತೆಗೆದುಕೊಂಡಿದ್ದರೆ ನಂಗೆ ಇನ್ನು ಹೆಚ್ಚು ಖುಷಿಯಾಗುತ್ತಿತ್ತು. ನಾನು ಬಿಜಿಪಿ ಸಿದ್ಧಾಂತ ಒಪ್ಪಿದ್ದೇನೆ ಎಂದು ಯುವಕ ಹೇಳಿದ್ದಾನೆ.

