ಅಪರಾಧ ರಾಜಕೀಯ ಸುದ್ದಿ

ಪೋಕ್ಸೊ ಪ್ರಕರಣ: ಸಿಐಡಿ ವಿಚಾರಣೆಗೆ ಗೈರಾದ ಯಡಿಯೂರಪ್ಪಗೆ ಕಾನೂನು ಸಂಕಷ್ಟ?

Share It

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆ ವೇಳೆ ನಗರದ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸಕ್ಕೆ ಬಂದಿದ್ದ ಮ್ಮ ಅಪ್ರಾಪ್ತೆ ಪುತ್ರಿ ಬಾಲಕಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯ ತಾಯಿ ಸಿಐಡಿಗೆ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಸಿಐಡಿ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿತ್ತು. ಆದರೆ ಸಿಐಡಿ ವಿಚಾರಣೆಗೆ ಗೈರುಹಾಜರಾದ ಯಡಿಯೂರಪ್ಪ ಅವರಿಗೆ ಇಂದು ಬುಧವಾರ ಮತ್ತೆ ಸಿಐಡಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು.

ಆದರೆ ಇಂದು ಮತ್ತೊಂದು ಬಾರಿ ಪೋಕ್ಸೊ ಪ್ರಕರಣದ ವಿಚಾರಣೆಗೆ ನೀಡಿದ್ದ ನೋಟಿಸ್ ಗೂ ಪ್ರತಿಕ್ರಿಯಿಸದೆ ಸಿಐಡಿ ವಿಚಾರಣೆಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಸಿಐಡಿ ಬಂಧಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ಸಿಐಡಿ ಈ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಆರೋಪಿ ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದೆ.

ಆದಾಗ್ಯೂ ರಾಜ್ಯಸರ್ಕಾರದ ಪರವಾಗಿ ಕೋರ್ಟ್ ನಲ್ಲಿ ವಾದಿಸುವುದಕ್ಕೆ ವಿಶೇಷ ಅಭಿಯೋಜಕರನ್ನಾಗಿ ಅಶೋಕ್ ಎನ್. ನಾಯಕ್ ಅವರನ್ನು ನೇಮಿಸಿ ಆದೇಶಿಸಲಾಗಿದೆ.


Share It

You cannot copy content of this page