ಚಿತ್ರದುರ್ಗ:
ನಟ ದರ್ಶನ್ ಹಾಗೂ ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಕೊಲೆ ಮಾಡಿದ ಪ್ರಕರಣ ಸಾಕಷ್ಟು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಬಲವಾದ ಸಾಕ್ಷಿಗಳು ಸಿಗುತ್ತಿವೆ. ಈಗ ಜೂನ್ 13ರ ತಡರಾತ್ರಿ ಚಿತ್ರದುರ್ಗದಲ್ಲಿ ಆರೋಪಿ ರಘು ಅವರನ್ನು ಕರೆತಂದು ಮಹಜರು ಮಾಡಲಾಗಿದೆ.
ಚಳ್ಳಕೆರೆ ಗೇಟ್ ಬಳಿ ರೇಣುಕಾ ಸ್ವಾಮಿ ಬೈಕ್ ನಿಲ್ಲಿಸಿದ್ದರು. ಆ ಬಳಿಕ ಅವರ ಕಿಡ್ನ್ಯಾಪ್ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸ್ಥಳ ಮಹಜರು ಮಾಡಲಾಗಿದೆ. ಎಲ್ಲಿ ಅವರನ್ನು ಕಿಡ್ನ್ಯಾಪ್ ಮಾಡಲಾಯಿತು, ಹೇಗೆ ಕರೆದುಕೊಂಡು ಹೋಗಲಾಯಿತು ಎನ್ನುವುದನ್ನು ರಘು ವಿವರಿಸಿದ್ದಾನೆ. ಸ್ಥಳ ಮಹಜರಿನ ವಿಡಿಯೋ ಲಭ್ಯವಾಗಿದೆ.

