ಅಪರಾಧ ರಾಜಕೀಯ ಸಿನಿಮಾ ಸುದ್ದಿ

ನಟ ದರ್ಶನ್ ಸೇರಿ ಯಾವ ಆರೋಪಿಗೂ ವಿಶೇಷ ಸೌಲಭ್ಯ ಕೊಡಬೇಡಿ: ಸಿಎಂ ಸಿದ್ದರಾಮಯ್ಯ

Share It


ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಬಂಧನವಾಗಿರುವ ನಟ ದರ್ಶನ್ ಗೆ ಪೊಲೀಸರು ವಿಶೇಷ ಸೌಲಭ್ಯ ಕೊಡುತ್ತಿದ್ದಾರೆ ಎಂಬ ಆರೋಪಕ್ಕೆ, ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಯಾವ ಆರೋಪಿಗೂ ವಿಶೇಷ ಸೌಲಭ್ಯ ಕೊಡಬೇಡಿ ಎಂದು ಪೊಲೀಸರಿಗೆ ತಾಕೀತು ಮಾಡಿದ್ದಾರೆ.

ಕಾನೂನು ಸುವ್ಯವಸ್ಥೆ ಸಂಬಂಧ ನಡೆಸ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ, ದರ್ಶನ್ ಸೇರಿದಂತೆ ಯಾವ ಆರೋಪಿಗೂ ವಿಶೇಷ ಸೌಲಭ್ಯ ಕೊಡಬೇಡಿ, ಬೇರೆ ಆರೋಪಿಗಳಿಗೆ ಕೊಡುವ ಟ್ರೀಟ್ಮೆಂಟ್ ಕೊಡಿ ಎಂದು ತಾಕೀತು ಮಾಡಿದ್ದಾರೆ.

ದರ್ಶನ್ ವಿಚಾರಣೆ ನಡೆಸುತ್ತಿರುವ ಠಾಣೆ ಸುತ್ತ ಶಾಮಿಯಾನ ಹಾಕಿದ್ದೀರ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇದೆಲ್ಲ ಯಾರ ಹಿತಾಸಕ್ತಿಗೆ ಮಾಡುತ್ತಿದ್ದೀರಾ? ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂ ಆದರು ಎನ್ನಲಾಗಿದೆ.

ಎರಡು ದಿನ ಸಿಸಿಟಿವಿ ಫೋಟೋಜ್ ಕೇಳಿ ಅರ್ಜಿ: ಎರಡು ದಿನದಿಂದ ಪೊಲೀಸರು ನಡೆದುಕೊಳ್ಳುವ ರೀತಿ ಸಾರ್ವಜನಿಕ ವಲಯದಲ್ಲಿ ಅನೇಕ ಊಹಾಪೋಹಗಳಿಗೆ ಕಾರಣವಾಗಿದ್ದು, ಈ ಎರಡು ದಿನದ ಸಿಸಿಟಿವಿ ಪೋಟೇಜ್ ನೀಡುವಂತೆ ವಕೀಲರು ಆರ್‌ಟಿಐ ಅರ್ಜಿ ಸಲ್ಲಿಕೆ ಮಾಡಿದ್ದಾರೆ.


Share It

You cannot copy content of this page