ಬೇಸಿಗೆ ಬಂತೆಂದರೆ ಸಾಕು ಎಲ್ಲರೂ ತಣ್ಣಗಿನ ನೀರನ್ನು ಕುಡಿಯಲು ಬಯಸುತ್ತಾರೆ. ಹಾಗೆ ತಂಪು ಪಾನೀಯ ಗಳನ್ನೂ ಹೆಚ್ಚಾಗಿ ಕುಡಿಯುತ್ತಾರೆ. ಆದ್ರೆ ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದು ಬಹಳ ಕಡಿಮೆ. ಆದರೆ ಮಡಿಕೆಯ ನೀರಿನಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ. ಯಾವ ಯಾವ ಪೋಷಕಾಂಶಗಳು ಇವೆ ಎಂಬುದನ್ನು ತಿಳಿಯೋಣ ಬನ್ನಿ .
ರೋಗನಿರೋಧಕ ಶಕ್ತಿಯ ವೃದ್ಧಿ
ಮಡಿಕೆಯಲ್ಲಿ ನೀರು ಕುಡಿಯುವುದರಿಂದ ನಿಮಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ಸಾಕಷ್ಟು ವಿಷ ಅಂಶಗಳು ಇರುತ್ತವೆ. ಆದರೆ ಮಣ್ಣಿನ ಮಡಿಕೆಯಲ್ಲಿ ಅವು ಶುದ್ಧಗೊಳ್ಳುತ್ತವೆ ಎಂಬುದು ಸಾಬೀತಾಗಿದೆ. ಆದ್ದರಿಂದ ಮಣ್ಣಿನ ಮಡಿಕೆ ನೀರು ಬಳಸುವುದು ಸೂಕ್ತ.
ಸನ್ ಸ್ಟ್ರೋಕ್ ತಡೆಗಟ್ಟುವಿಕೆ
ಮಣ್ಣಿನ ಮಡಿಕೆಯ ನೀರು ಸಾಕಷ್ಟು ತಣ್ಣಗೆ ಇರುತ್ತವೆ. ಜೊತೆಗೆ ಮಣ್ಣಿನಲ್ಲಿರುವ ಪೋಷಕಾಂಶಗಳು ನೀರಿನೊಂದಿಗೆ ಸೇರಿರುತ್ತವೆ. ಇವು ಸೂರ್ಯನ ಶಾಖವನ್ನು ಪ್ರತಿರೋಸಲು ಸಹಕಾರಿ ಯಾಗುತ್ತದೆ.
ಗಂಟಲು ನೋವಿಗೆ ಪರಿಹಾರ
ಗಂಟಲು ನೋವು ಸಾಮಾನ್ಯವಾಗಿ ಹೆಚ್ಚು ತಣ್ಣಗಿರುವ ನೀರನ್ನು ಕುಡಿದಾಗ ಬರುತ್ತದೆ.ಆದ್ರೆ ಮಡಿಕೆಯ ನೀರು ಹೆಚ್ಚು ತಣ್ಣಗೆ ಇರದೇ ಶಾಖಕ್ಕೆ ತಕ್ಕಂತೆ ಇರುತ್ತದೆ. ಮಡಿಕೆ ನೀರು ಕುಡಿಯುವುದರಿಂದ ಗಂಟಲು ನೋವು ನಿವಾರಣೆ ಯಾಗುತ್ತದೆ.
ಚರ್ಮವನ್ನು ಸ್ವಚ್ಛವಾಗಿಡಲು ಸಹಾಯಕ.
ಬೇಸಿಗೆಯಲ್ಲಿ ನೀರೇ ದೇಹಕ್ಕೆ ಆಧಾರ. ಮಡಿಕೆಯ ನೀರಿನಲ್ಲಿ ಹೆಚ್ಚು ಅಂಶಗಳು ಇರುವ ಜೊತೆಗೆ ನೀರಿನ Ph ಮೌಲ್ಯ ವನ್ನು ಸುಧಾರಿಸುತ್ತದೆ. ದೇಹದ ತೇವಾಂಶವನ್ನು ಕಾಪಾಡುತ್ತದೆ.

