ಆರೋಗ್ಯ ಉಪಯುಕ್ತ ಸುದ್ದಿ

ರಕ್ತದಾನದ ಬಗ್ಗೆ ಜಾಗೃತಿ ಅಗತ್ಯ: ಡಾ.ಗೀತಾಲಕ್ಷ್ಮಿ

Share It

ಶಿವಮೊಗ್ಗ : ರಕ್ತದಾನದ ಬಗ್ಗೆ ಜಾಗೃತಿ ಅಗತ್ಯವಾಗಿದ್ದು ಹೆಚ್ಚು ಅರಿವು ಮೂಡಿಸಬೇಕಾಗಿದೆ ಎಂದು ಮೆಗ್ಗಾನ್ ಆಸ್ಪತ್ರೆಯ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ|| ಗೀತಾಲಕ್ಷ್ಮೀ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಹ್ಯಾದ್ರಿ ಕಲಾ ಕಾಲೇಜು, ರೆಡ್‌ಕ್ರಾಸ್, ಎನ್‌ಎಸ್‌ಎಸ್ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ವಿಶ್ವರಕ್ತದಾನಿಗಳ ದಿನಾಚರಣೆಯನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ರಕ್ತದಾನ ಮಹತ್ವವಾದುದ್ದು, ರಕ್ತವನ್ನು ಮತ್ತೆ ಸೃಷ್ಠಿಸಲು ಸಾಧ್ಯವಿಲ್ಲ. ಯುವಕರು ಹೆಚ್ಚು ರಕ್ತದಾನ ಮಾಡಲು ಮುಂದಾಗಬೇಕಾಗಿದೆ. ವಿದ್ಯಾರ್ಥಿಗಳ ಪಾತ್ರ ಇದರಲ್ಲಿ ಮಹತ್ವವಾದುದ್ದು ಮೂಡ ನಂಬಿಕೆಗಳಿಂದ ದೂರು ಉಳಿದು ಒಬ್ಬರ ಪ್ರಾಣ ಉಳಿಸಲು ರಕ್ತದಾನ ಮಾಡಬೇಕು ಎಂದರು.

ವಿದ್ಯಾರ್ಥಿ ಕ್ಷೇಮಾಧಿಕಾರಿ ಕೆ.ಎನ್.ಮಂಜುನಾಥ್ ಮಾತನಾಡಿ, ರಕ್ತದಾನ ಮಾಡಿದವರು ಕೂಡ ರಕ್ತಸಂಬಂಧಿಗಳೇ ಆಗುತ್ತಾರೆ. ಒಬ್ಬರ ಜೀವ ಉಳಿಸಲು ರಕ್ತದಾನ ಬಹಳ ಪಾವಿತ್ರವಾದದ್ದು, ಮುಂಬರುವ ದಿನಗಳಲ್ಲಿ ಸಹ್ಯಾದ್ರಿಯ ಮೂರು ಕಾಲೇಜುಗಳಿಂದ ಎನ್‌ಎಸ್‌ಎಸ್ ಘಟಕ, ರೆಡ್‌ಕ್ರಾಸ್ ಇವರ ನೆರವು ಪಡೆದು ರಕ್ತದಾನ ಶಿಬಿರವನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿಸಲಾಗುವುದು ಎಂದರು.


Share It

You cannot copy content of this page