ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯಸರ್ಕಾರ ತೈಲ ಮಾರಾಟ ತೆರಿಗೆ ಹೆಚ್ಚಳ ಮಾಡಿದ ಪರಿಣಾಮ ಇಂದಿನಿಂದಲೇ ಪೆಟ್ರೋಲ್, ಡೀಸೆಲ್ ಬೆಲೆಗಳು ದಿಢೀರ್ ಏರಿಕೆಯಾಗಿವೆ.
ಇಂದಿನಿಂದಲೇ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 3 ರೂಪಾಯಿ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 3.5 ರೂಪಾಯಿ ಏರಿಕೆಯಾಗಿದೆ.
ಇದರಿಂದ ರಾಜ್ಯದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಒಂದಕ್ಕೆ ಇದ್ದ 99 ರೂಪಾಯಿಗೆ ಬದಲು 103 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ಕೂಡ ಲೀಟರಿಗೆ 85 ರೂಪಾಯಿಯಿಂದ 89 ರೂಪಾಯಿ 20 ಪೈಸೆಗೆ ಏರಿಕೆಯಾಗಿದೆ. ಈ ಹೊಸ ತೈಲ ದರಗಳು ರಾಜ್ಯದಲ್ಲಿ ಇಂದಿನಿಂದಲೇ ಜಾರಿಯಾಗಲಿವೆ. ಪರಿಣಾಮ ವಾಹನ ಸವಾರುದಾರರಿಗೆ ತೈಲ ದರ ಏರಿಕೆ ದೊಡ್ಡ ಶಾಕ್ ಆಗಿದೆ.

