ಬೆಂಗಳೂರು: ದೊಡ್ಮನೆಯಲ್ಲೊಂದು ಡೈವೋರ್ಸ್ ಪ್ರಕರಣ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದು, ಅದರ ಭಾಗವಾಗಿ ಕಾಂತಾರ ಚೆಲುವೆ ಸಪ್ತಮಿ ಗೌಡ, ನಟ ಯುವ ಪತ್ನಿ ಶ್ರೀದೇವಿ ಬೈರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸಪ್ತಮಿ ಗೌಡ ಅವರು ಸಿಟಿ ಸಿವಿಲ್ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದು,10 ಕೋಟಿ ರೂ ಪರಿಹಾರ ನೀಡಿ ಸಾರ್ವಜನಿಕವಾಗಿ ನನಗೆ ಕ್ಷಮೆ ಕೇಳಬೇಕು ಎಂದು ಸಪ್ತಮಿ ಗೌಡ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅಂತೆಯೇ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡದಂತೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ಮತ್ತು ಶ್ರೀದೇವಿ ಬೈರಪ್ಪ ನಡುವೆ ಒಡಕು ಮೂಡಿದ್ದು, ಅವರಿಬ್ಬರ ನಡುವೆ ವಿಚ್ಛೇದನದ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀದೇವಿ, ವಿಚ್ಛೇದನಕ್ಕೆ ಸಪ್ತಮಿ ಗೌಡ ಮತ್ತು ಯುವ ನಡುವೆ ಇರುವ ಅಫೇರ್ ಕಾರಣ ಎಂದು ಆರೋಪ ಮಾಡಿದ್ದರು.
ಜತೆಗೆ ಹೊಟೇಲ್ ರೂಮ್ ನಲ್ಲಿ ಸಪ್ತಮಿ ಗೌಡ ಮತ್ತು ಯುವ ರಾಜ್ ಕುಮಾರ್ ಇದ್ದರು. ಹೀಗಾಗಿ, ವಿನಾಕಾರಣ ನನಗೆ ಡೈವೋರ್ಸ್ ಕೊಡಲು ಮುಂದಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಎಲ್ಲ ಆರೋಪಗಳಿಗೆ ಬೇಸತ್ತ ಸಪ್ತಮಿ ಗೌಡ, ಇದೀಗ ನ್ಯಾಯಾಲಯದ ಮೊರೆ ಹೋಗಿದ್ದು, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಕಾಂತಾರ ಸಿನಿಮಾದ ಲೀಲಾ ಪಾತ್ರದ ಮೂಲಕ ಕನ್ನಡ ಚಿತ್ರರಂಗದ ಹಾಟ್ ಪೆವರೇಟ್ ಎನಿಸಿಕೊಂಡ
ಯುವ ಮತ್ತು ಸಪ್ತಮಿ ಗೌಡ ಇತ್ತೀಚೆಗೆ ಯುವ ಸಿನಿಮಾದಲ್ಲಿ ನಟನೆ ಮಾಡಿದ್ದರು. ಅನಂತರ ಯುವ ದಂಪತಿಗಳ ನಡುವೆ ಬಿರುಕು ಮೂಡಿತ್ತು. ಇದೀಗ ಡೈವೋರ್ಸ್ ಹಂತಕ್ಕೆ ಬಂದಿದ್ದು, ಶ್ರೀದೇವಿ ಬೈರಪ್ಪ ಸಪ್ತಮಿ ಗೌಡ ಅವರನ್ನೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ.

