ಬೆಂಗಳೂರು: ಮೃತ ರೇಣುಕಾ ಸ್ವಾಮಿ ಮೇಲೆ ಡಿ ಬಾಸ್ ಗ್ಯಾಂಗ್ ಅದೆಷ್ಟರ ಮಟ್ಟಿಗೆ ಕ್ರೌರ್ಯ ಮೆರೆದಿತ್ತು ಎಂಬುದು ಪೋಸ್ಟ್ಮಾರ್ಟ್ಂ ರಿಪೋರ್ಟ್ ನಲ್ಲಿ ವರದಿಯಾಗಿದ್ದು, ಮೈಜುಮ್ಮೆನಿಸುತ್ತದೆ.
ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿದ್ದ ರೇಣುಕಾ ಸ್ವಾಮಿಯನ್ನು, ಡಿ ಗ್ಯಾಂಗ್ ಕಾರ್ ಶೆಡ್ ನಲ್ಲಿ ಹಾಕಿಕೊಂಡು ಮನಸ್ಸೋಯಿಚ್ಛೆ ಥಳಿಸಿದ್ದರು. ಡಿ ಗ್ಯಾಂಗ್ ದಾಂಡಿಗರ ಹೊಡೆತಕ್ಕೆ ರೇಣುಕಾ ಸ್ವಾಮಿ ದೇಹದ 34 ಭಾಗದಲ್ಲಿ ಗಾಯಗಳಾಗಿವೆ ಎಂದು ಪೋಸ್ಟ್ ಮಾರ್ಟಂ ರಿಪೋರ್ಟ್ ಹೇಳುತ್ತಿವೆ.
ಡಿ ಗ್ಯಾಂಗ್ ಥಳಿಸಿದ್ದರಿಂದ ರೇಣುಕಾ ಸ್ವಾಮಿ ದೇಹದ ವಿವಿಧ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿತ್ತು ಎನ್ನಲಾಗಿದೆ. ಎದೆಯ ಮೇಲೆ ಕಾಲಿನಿಂದ ಒದ್ದು, ಬೆಲ್ಟ್ ನಿಂದ ದೇಹದ ವಿವಿಧ ಭಾಗಕ್ಕೆ ಬಾರಿಸಲಾಗಿದೆ. ಎದೆಯ ಮೂಳೆಗಳು ಮುರಿದಿದ್ದು, ಶ್ವಾಸಕೋಸಕ್ಕೆ ಚುಚ್ಚಿಕೊಂಡಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.
ರೇಣುಕಾ ಸ್ವಾಮಿ ಮರ್ಮಾಂಗಕ್ಕೆ ಒದ್ದಿರುವ ಕುರಿತು ಕೂಡ ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ವಿವರಿಸಲಾಗಿದೆ. ಮುಖದ ಮತ್ತು ದವಡೆ ಮೂಳೆಗಳು ಮುರಿದಿದ್ದು, ಇದಕ್ಕೆ ಸಿಕ್ಕ ಸಿಕ್ಕ ವಾಹನಗಳಿಗೆ ಆತನನ್ನು ಡಿಕ್ಕಿ ಹೊಡೆಸಿದ್ದು ಕಾರಣ ಎನ್ನಲಾಗಿದೆ. ಈ ಎಲ್ಲ ಅಂಶಗಳನ್ನು ವರದಿ ಉಲ್ಲೇಖಿಸಿದ್ದು, ಡಿ ಗ್ಯಾಂಗ್ ಅದೆಷ್ಟು ಕ್ರೂರವಾಗಿ ನಡೆದುಕೊಂಡಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ.
ಕರೆಂಟ್ ಶಾಕ್ ಕೊಟ್ಟು ಕ್ರೌರ್ಯ: ಈ ನಡುವೆ ಆರೋಪಿಗಳು ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟಿದ್ದಾರೆ ಎಂಬ ಅಂಶ ವರದಿಯಲ್ಲಿದೆ. ಪೊಲೀಸರು ಈಗಾಗಲೇ ಈ ಅನುಮಾನದಲ್ಲಿ ಕರೆಂಟ್ ಶಾಕ್ ಕೊಡಲು ಬಳಸಿದ್ದ ಡಿವೈಸ್ ವಶಕ್ಕೆ ಪಡೆಯಲು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ, ಯಾವ ಆರೋಪಿಗಳು
ವಡವೆಗಳನ್ನು ಕದ್ದಿದ್ದ ರಾಘವೇಂದ್ರ: ಈ ನಡುವೆ ರೇಣುಕಾ ಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದಿದ್ದ ಆರೋಪಿ ರಾಘವೇಂದ್ರ ಕೊಲೆಯ ನಂತರ ಸ್ವಾಮಿ ಮೈಮೇಲಿದ್ದ ವಡವೆಗಳನ್ನು ಕೂಡ ಕದ್ದು, ಕೊಂಡೊಯ್ದಿದ್ದ ಎನ್ನಲಾಗಿದೆ. ಕೊಲೆಯಾಗುತ್ತಿದ್ದಂತೆ ಶೆಡ್ ನಿಂದ ಎಸ್ಕೇಪ್ ಆಗಿದ್ದ ರಾಘವೇಂದ್ರ ನನ್ನು ದರ್ಶನ್ ಗ್ಯಾಂಗ್ ಹತ್ತು ಲಕ್ಷ ಕೊಡುವುದಾಗಿ ವಾಪಸ್ ಕರೆಸಿಕೊಂಡಿತು.
ಶವ ವಿಲೇವಾರಿ ಮಾಡಲು ಆತನನ್ನು ಬಳಸಿಕೊಂಡಿತ್ತು. ಆಗ ರೇಣುಕಾ ಸ್ವಾಮಿ ಮೈಮೇಲಿನ ವಡವೆ ಕದ್ದು, ಹತ್ತು ಲಕ್ಷ ಹಣ ಹಾಗೂ ವಡವೆಗಳನ್ನು ತನ್ನ ಹೆಂಡತಿ ಕೈಗೆ ಕೊಟ್ಟು ಚಿತ್ರದುರ್ಗಕ್ಕೆ ಕಳುಹಿಸಿದ್ದ ಎನ್ನಲಾಗಿದೆ. ಪೊಲೀಸರು ಸ್ಥಳ ಮಹಜರು ವೇಳೆ ಇದೆಲ್ಲವನ್ನೂ ರಿಕವರಿ ಮಾಡಿದ್ದಾರೆ ಎನ್ನಲಾಗಿದೆ.

