ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಭಾನುವಾರ ಎ-1 ಆರೋಪಿ ಪವಿತ್ರಾ ಗೌಡ ಅವರ ಮನೆಯಲ್ಲಿ ಪೊಲೀಸರು ಮಹಜರು ನಡೆಸಿದರು. ಸ್ಥಳ ಮಹಜರು ನಡೆಸಲು ಪವಿತ್ರಾ ಗೌಡ ಮತ್ತು ಇನ್ನೊಬ್ಬ ಆರೋಪಿ ಪವನ್ ನನ್ನು ಪೊಲೀಸರು ಕರೆತಂದಿದ್ದರು. ಆದರೆ ಮಹಜರು ಕಾರ್ಯ ಮುಗಿದ ನಂತರ ಪವಿತ್ರಾ ಗೌಡ ನಗುತ್ತಲೇ ತಮ್ಮ ಮನೆಯಿಂದ ಹೊರಬಂದಿದ್ದು ಗಮನ ಸೆಳೆಯಿತು.
ಅದೇ ರೀತಿ ಪವನ್ ಕೂಡ ಹಸನ್ಮುಖಿಯಾಗಿ ಪೊಲೀಸ್ ವ್ಯಾನ್ ಹತ್ತಿದ್ದು ನಮಗೆ ಪ್ರಭಾವಿಗಳ ಬೆಂಬಲವಿದೆ ಎಂದು ಹೇಳುವ ಸೂಚನೆಂತೆ ಕಂಡಿತು.
ಆರೋಪಿಗಳ ಈ ನಡವಳಿಕೆ ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ, ಆರೋಪಿಗಳನ್ನು ಪೊಲೀಸರು ಯಾವ ರೀತಿ ಟ್ರೀಟ್ ಮಾಡುತ್ತಿದ್ದಾರೆ. ಠಾಣೆ ಸುತ್ತ ಶಾಮಿಯಾನ ಹಾಕಿ, ಜನರು ಮತ್ತು ಮಾಧ್ಯಮದಿಂದ ಮರೆ ಮಾಡಿದ್ದು, ಅವರ ಖುಷಿಗೆ ಕಾರಣವಾಗಿದೆಯಾ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುವಂತೆ ಮಾಡಿದೆ.

