ಅಪರಾಧ ಸುದ್ದಿ

ಗಾಂಜಾ ಮಾರುತ್ತಿದ್ದ ನಾಲ್ವರು ಯುವಕರು ಸೆರೆ

Share It

ಶಿವಮೊಗ್ಗ : ಸಹ್ಯಾದ್ರಿ ಕಾಲೇಜ್ ಹಿಂಭಾಗದ ಚೌಡಮ್ಮ ದೇವಸ್ಥಾನದ ಹತ್ತಿರದ ಸೇತುವೆಯ ಮೇಲೆ ಮತ್ತೂರು ಕಡೆಗೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಜಯನಗರ ಪೊಲೀಸ್ ಠಾಣೆಯ ಪಿಐ ಸಿದ್ದೇಗೌಡ ಹೆಚ್.ಎಂ ಮತ್ತು ಸಿಇಎನ್ ಠಾಣೆಯ ಪಿಎಸ್ ಐ ಬಸವರಾಜ ಬಿರಾದಾರ ನೇತೃತ್ವದ ಸಿಬ್ಬಂದಿಗಳ ತಂಡ ದಾಳಿ ನಡೆಸಿತು.

ದಾಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಭದ್ರಾವತಿಯ ತಡಸ ಗ್ರಾಮದ ಸೈಯದ್ ಸಲೇಹ @ ಸಾಲಿಯ @ ಸಾಲು, (28) , ಅನ್ವರ್ ಕಾಲ ನಿಯ ಮಹಮದ್ ಮುಸ್ತಪ @ ಸಮ್ಮು, (25 ), ನೆಹರುನಗರದ ಮುಬಾರಕ್ @ ಡಿಚ್ಚಿ, (27) , ಜಟ್ ಪಟ್ ನಗರದ ನ್ಯಾಮತ್ ಖಾನ್( 27 ) ಇವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಅಂದಾಜು ಮೌಲ್ಯ 1,35,000/- ರೂಗಳ 1 ಕೆಜಿ 65 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು, ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ.


Share It

You cannot copy content of this page