ಬೆಂಗಳೂರು: ನಟರಾದ ಚಿಕ್ಕಣ್ಣ ಮತ್ತು ದರ್ಶನ್ ನಡುವೆ ಬಿಗಿಯಾದ ಸ್ನೇಹವಿದ್ದು, ಇಬ್ಬರೂ ಆತ್ಮೀಯರಾಗಿ ಇದ್ದಾರೆ. ಅದರಲ್ಲೂ ಚಿಕ್ಕಣ್ಣ ಅಭಿನಯದ ‘ಉಪಾಧ್ಯಕ್ಷ’ ಸಿನಿಮಾ ವೇಳೆ ಚಿಕ್ಕಣ್ಣ ಬೆನ್ನಿಗೆ ನಿಂತಿದ್ದವರಲ್ಲಿ ದರ್ಶನ್ ಮೊದಲಿಗರು. ಇದು ಒಂದು ಕಡೆಯಾದರೆ, ಇದೀಗ ದರ್ಶನ್ ವಿರುದ್ಧ ಕೇಳಿಬಂದಿರುವ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ಚಿಕ್ಕಣ್ಣ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದ್ರಲ್ಲೂ ಕೊಲೆ ನಡೆಯುವ ಕೆಲವೇ ಗಂಟೆಗಳ ಹಿಂದೆ ನಟ ಚಿಕ್ಕಣ್ಣ ಕೂಡ ದರ್ಶನ್ ಅಂಡ್ ಗ್ಯಾಂಗ್ ಜೊತೆಗೆ ಖಾಸಗಿ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡಿದ್ದರಂತೆ, ಹಾಗಾದ್ರೆ ನಟ ಚಿಕ್ಕಣ್ಣ ಕೂಡ ಜೈಲಿಗೆ ಹೋಗಲಿದ್ದಾರಾ? ಎಂಬ ಪ್ರಶ್ನೆಗೆ ಉತ್ತರ ಇಕ್ಲಿದೆ…
ನಟ ಚಿಕ್ಕಣ್ಣಗೆ ಪೊಲೀಸರ ನೋಟಿಸ್!
ದರ್ಶನ್ ಸಹವಾಸ ಮಾಡಿದ್ದಕ್ಕೆ ನೂರಾರು ಜನ ಸಮಸ್ಯೆಗೆ ಸಿಲುಕಿದ್ದಾರೆ, ಅದರಲ್ಲೂ ಈಗ ತಾನೆ ಹೀರೋ ಆಗಿ ಜೀವನ ಕಟ್ಟಿಕೊಳ್ಳುತ್ತಿದ್ದ ನಟ ಚಿಕ್ಕಣ್ಣ ಕೂಡ ಮಾಜಿ ಡಿ-ಬಾಸ್ ಸಹವಾಸದಿಂದ ಪೊಲೀಸ್ ಠಾಣೆಗೆ ಹೋಗುವಂತಾಗಿದೆ. ಇಲ್ಲಿ ಆಗಿದ್ದು ಏನು ಅಂದ್ರೆ, ಜೂನ್ 8 ರಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮತ್ತು ಕೊಲೆ ನಡೆಸುವ ಮೊದಲು ದರ್ಶನ್ ಅಂಡ್ ಗ್ಯಾಂಗ್ ಆರೋಪಿ ವಿನಯ್‌ಗೆ ಸೇರಿದ ಸ್ಟೋನಿ ಬ್ರೂಕ್ ಎಂಬ ಖಾಸಗಿ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದರಂತೆ. ಇದೇ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗವಹಿಸಿದ್ರು ಎನ್ನಲಾಗಿದೆ. ಹೀಗಾಗಿ ಪೊಲೀಸರು ತನಿಖೆಯನ್ನ ನಡೆಸಿ ಈ ವಿಚಾರ ಕನ್ಫರ್ಮ್ ಮಾಡಿಕೊಂಡಿದ್ದು, ಇದೀಗ ನಟ ಚಿಕ್ಕಣ್ಣಗೆ ವಿಚಾರಣೆ ಬಾ ಎಂದು ನೋಟಿಸ್ ಕೂಡ ನೀಡಿದ್ದಾರೆ.
ನಟ ಚಿಕ್ಕಣ್ಣ ಕೂಡ ಅರೆಸ್ಟ್?
ಹೌದು, ಇದೀಗ ದರ್ಶನ್ ಅರೆಸ್ಟ್ ಆದ ನಂತರ ನಟ ಚಿಕ್ಕಣ್ಣ ಕೂಡ ಅರೆಸ್ಟ್ ಆಗುತ್ತಾರಾ? ಎಂಬ ಪ್ರಶ್ನೆ ಕಾಡತೊಡಗಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ವಿಚಾರಣೆಗೆ ಹಾಜರಾಗಲು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಇಂದು ಬೆಳಗ್ಗೆ ಚಿಕ್ಕಣ್ಣನಿಗೆ ನೋಟಿಸ್ ನೀಡಿದ್ದು ತಕ್ಷಣ ಕಾಮಾಕ್ಷಿಪಾಳ್ಯ ಠಾಣೆಗೆ ಹಾಜರಾಗಲು ಸೂಚನೆ ಕೂಡ ನೀಡಿದ್ದಾರಂತೆ. ಹೀಗಾಗಿ ಚಿಕ್ಕಣ್ಣ ವಿಚಾರಣೆಗೆ ಓಡೋಡಿ ಬರುವ ಸಾಧ್ಯತೆ ಇದೆ.
ಆದರೆ ಸದ್ಯಕ್ಕೆ ನಟ ಚಿಕ್ಕಣ್ಣ ಅರೆಸ್ಟ್ ಆಗುವುದಿಲ್ಲ, ಆದರೆ ಪಾರ್ಟಿ ಮಾಡುವ ಸಮಯದಲ್ಲಿ. ಈ ಕೊಲೆ ಸಂಬಂಧಿಸಿದ ವಿಚಾರ ಪ್ರಸ್ತಾಪ ಆಗಿತ್ತಾ? ನಟ ದರ್ಶನ್ ರೇಣುಕಾಸ್ವಾಮಿ ಕೊಲೆಯ ಬಗ್ಗೆ ಏನಾದ್ರೂ ಹೇಳಿದ್ದರಾ? ಎಂಬ ಬಗ್ಗೆ ದರ್ಶನ್ ನಡೆಸಿದ್ದ ಖಾಸಗಿ ರೆಸ್ಟೋರೆಂಟ್ ಪಾರ್ಟಿಯಲ್ಲಿ ಚರ್ಚೆ ನಡೆದಿತ್ತಾ? ಎಂಬ ಬಗ್ಗೆ ನಟ ಚಿಕ್ಕಣ್ಣ ಅವರನ್ನ ಪೊಲೀಸರು ವಿಚಾರಣೆ ಮಾಡಲಿದ್ದಾರೆ ಎನ್ನಲಾಗಿದೆ. ಹಾಗೇ ಚಿಕ್ಕಣ್ಣ ಏನಾದ್ರೂ ಈ ವಿಚಾರಗಳನ್ನ ತಿಳಿಸಿದರೆ, ಚಿಕ್ಕಣ್ಣ ಹೇಳಿಕೆಯನ್ನ ಸಾಕ್ಷಿಯಾಗಿ ಪರಿಗಣಿಸುತ್ತೇವೆ ಅಂತಿದ್ದಾರೆ ಪೊಲೀಸರು. ಹೀಗಾಗಿ ನಟ ಚಿಕ್ಕಣ್ಣಗೆ ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.

